ಮೌಲ್ವಿಯನ್ನ ಗಡಿಪಾರು ಮಾಡದೆ ಸತೀಶ್‌ರನ್ನ ಹೇಗೆ ಗಡಿಪಾರು ಮಾಡುತ್ತೀರಿ?

ಮೈಸೂರು:

    ಮೌಲ್ವಿಯನ್ನ ಗಡಿಪಾರು ಮಾಡದೆ ಸತೀಶ್‌ರನ್ನ ಹೇಗೆ ಗಡಿಪಾರು ಮಾಡುತ್ತೀರಿ? ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.ಉದಯಗಿರಿ ಪೊಲೀಸ್ ಠಾಣೆ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಈ ಗೂಂಡಾ ಪ್ರವೃತ್ತಿ ಕಿಡಿಗೇಡಿಗಳ ಪ್ರೋತ್ಸಾಹಕ್ಕೆ ಕಾಂಗ್ರೆಸ್ ಕಾರಣ. ಶ್ರೀರಾಮಸೇನಾ ಸಂಘಟನೆ ಇದನ್ನು ಖಂಡಿಸುತ್ತದೆ.

   ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಘಟನೆಗಳ ನಂತರ ಇಲ್ಲಿ ನಡೆದಿದೆ. ವಿವಾದಿತ ಪೋಸ್ಟ್‌ ಹಾಕಿದ್ದಾರೆ. ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ ಸಾವಿರಾರು ಮತಾಂಧರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ್ದಕ್ಕೆ ಯಾವ ಶಿಕ್ಷೆ? ಅಲ್ಲಿ ಖುದ್ದಾಗಿ ಪ್ರಚೋದನೆ ನೀಡಿದ ಮೌಲ್ವಿಗೆ ಯಾವ ಶಿಕ್ಷೆ? ಮೌಲ್ವಿಯನ್ನ ಗಡಿಪಾರು ಮಾಡದೆ ಸತೀಶ್‌ರನ್ನ ಹೇಗೆ ಗಡಿಪಾರು ಮಾಡುತ್ತೀರಿ? ವಿವಾದಿತ ಪೋಸ್ಟ್ ಸತೀಶ್ ಹಾಕಿಯೇ ಇಲ್ಲ. ಒಂದು ವಾರದ ಹಿಂದಿನಿಂದಲೂ ಅದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಸತೀಶ್ ಡ್ರೈ ಫ್ರೂಟ್ ಫ್ಯಾಕ್ಟರಿ ಯಲ್ಲಿ 150 ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಕೆಲಸವನ್ನು ಕೊಟ್ಟಿದ್ದಾನೆ.

   ಈ ಸ್ಟೇಟಸ್ ಅವರು ಹಾಕೇ ಇಲ್ಲ. ಆದರೆ ಇದೊಂದು ನೆಪದಲ್ಲಿ ಪೊಲೀಸರಿಗೆ ಭಯ ಹುಟ್ಟಿಸಬೇಕು ಎಂಬ ಷಡ್ಯಂತ್ರದಿಂದ ಈ ದಾಳಿ ನಡೆದಿದೆ, ಸಂವಿಧಾನ ಕಾನೂನು ಎಲ್ಲರಿಗೂ ಒಂದೇ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ಈ ಸರ್ಕಾರ ತಮ್ಮ ಮನಸಿಗೆ ಬಂದಂತೆ ಕಾನೂನು, ಪೊಲೀಸ್ ಇಲಾಖೆಯನ್ನ ದುರುಪಯೋಗಪಡಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಈ ಸರ್ಕಾರ ಇರೋವರಿಗೂ ಹಿಂದೂಗಳಿಗೆ ನೆಮ್ಮದಿ ಇಲ್ಲ, ಸಂವಿಧಾನ, ಕಾನೂನು ಉಲ್ಲಂಘನೆಗೂ ಕೊನೆ ಇಲ್ಲ ಎಂದರು.

Recent Articles

spot_img

Related Stories

Share via
Copy link