ಬಂಡಾಯ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಮಾಯಾವತಿ…!

ಬೆಂಗಳೂರು

     ಬಿಜೆಪಿ ಸೆಡ್ಡು ಹೊಡೆದು ಗಾಂಧಿ ನಗರದಿಂದ ಬಂಡಾಯವಾಗಿ ಸ್ಪರ್ಧಿಸಿರುವ ಕೃಷ್ಣಯ್ಯ ಶೆಟ್ಟಿ ಹಾಗೂ ಕಾಂಗ್ರೆಸ್ ಬಂಡಾಯ ನಾಯಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಪುಲಕೇಶಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ವರಿಷ್ಠೆ ಮಾಯಾವತಿ ಮೇ 5ರಂದು ಪ್ರಚಾರ ಮಾಡಲಿದ್ದಾರೆ.

   ಈಗಾಗಲೇ ನನಗೆ ಮುಸ್ಲಿಂ, ದಲಿತ ಮತ್ತು ಕ್ರಿಶ್ಚಿಯನ್ ಬೆಂಬಲವಿದೆ , ಮಾಯಾವತಿ ಪ್ರಚಾರದಿಂದ ಪುಲಕೇಶಿನಗರದಿಂದ ಹೆಚ್ಚಿನ ಮತಗಳನ್ನು ಗಳಿಸಲು ಸಹಾಯವಾಗುತ್ತಿದೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.

   ಕರ್ನಾಟಕ ವಿಧಾನಸಭೆಯ 130 ಸ್ಥಾನಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಮೇ 5 ರಂದು ಅರಮನೆ ಮೈದಾನದಲ್ಲಿ ಪಕ್ಷದ ವರಿಷ್ಠರು ಸಮಾವೇಶ ನಡೆಸಲಿದ್ದಾರೆ ಎಂದು ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ. ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಬಿಎಸ್‌ಪಿ ಅಗತ್ಯವಾಗಿದೆ ಎಂದಿದ್ದಾರೆ.

     ಮಾಯಾವತಿ ಅವರು ಅರಮನೆ ಮೈದಾನದಿಂದ ಪ್ರಚಾರ ಆರಂಭಿಸಲಿದ್ದಾರೆ ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದ್ದಾರೆ. ಗಾಂಧಿನಗರ ವಿಧಾನಸಭೆಯಿಂದ ಸ್ವತಂತ್ರ ಅಭ್ಯರ್ಥಿ ಯಾಗಿರುವ ಎನ್ ಕೃಷ್ಣಯ್ಯ ಶೆಟ್ಟಿ ಅವರಿಗೆ ಬಿಎಸ್ ಪಿ ಬೆಂಬಲಿಸುತ್ತದೆ, ಹಾಗೆಯೇ ತನ್ವೀರ್ ಸೇಠ್ ವಿರುದ್ಧ ನರಸಿಂಹರಾಜ ವಿಧಾನಸಭೆಯ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಅವರನ್ನು ಬೆಂಬಲಿಸಲಾಗುತ್ತದೆ” ಎಂದು ಕೃಷ್ಣಮೂರ್ತಿ ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link