ಅಕ್ರಮ ಕೋಚಿಂಗ್‌ ಸೆಂಟರ್‌ ಗಳಿಗೆ ಬೀಗ ಜಡಿದ ಎಂಸಿಡಿ

ನವದೆಹಲಿ:

    ದೆಹಲಿಯ ಕೋಚಿಂಗ್ ಸೆಂಟರ್ ನ ಬೇಸ್‌ಮೆಂಟ್ ನಲ್ಲಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ನಂತರ ಎಚ್ಚೆತ್ತುಕೊಂಡಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ), 25 ಅಕ್ರಮ ಬೇಸ್‌ಮೆಂಟ್ ಕೋಚಿಂಗ್ ಸೆಂಟರ್‌ಗಳನ್ನು ಸೀಲ್ ಮಾಡಿದೆ.

   ಎಂಸಿಡಿ ಅಧಿಕೃತ ಮಾಹಿತಿಯ ಪ್ರಕಾರ ಜುಲೈ 28 ರಿಂದ ಜುಲೈ 31 ರವರೆಗೆ ನಗರದ ವಿವಿಧ ಭಾಗಗಳಲ್ಲಿರುವ ಕೋಚಿಂಗ್ ಸೆಂಟರ್‌ಗಳು, ಕಚೇರಿಗಳು ಅಥವಾ ಇತರ ವಾಣಿಜ್ಯ ಸಂಸ್ಥೆಗಳಾಗಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 25 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ. ಮಧ್ಯ ದೆಹಲಿಯ ರಾಜಿಂದರ್ ನಗರ ಮತ್ತು ಪಶ್ಚಿಮ ದೆಹಲಿಯ ಪಟೇಲ್ ನಗರ ಮತ್ತು ರಂಜೀತ್ ನಗರ ಪ್ರದೇಶಗಳಲ್ಲಿನ ಕೋಚಿಂಗ್ ಸೆಂಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.ಓಲ್ಡ್ ರಾಜಿಂದರ್ ನಗರವೊಂದರಲ್ಲೇ, ಬಾರಾ ಬಜಾರ್ ಮಾರ್ಗದ ಸ್ಟ್ರೆಚ್‌ನಲ್ಲಿ 18 ಬೇಸ್‌ಮೆಂಟ್‌ಗಳನ್ನು ಸೀಲ್ ಮಾಡಲಾಗಿದೆ.

   ಮಾಹಿತಿಯ ಪ್ರಕಾರ. ಈ ಮೂರು ಪ್ರದೇಶಗಳಲ್ಲಿ ಒಟ್ಟು 15 ಆಸ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ಏಳು ಓಲ್ಡ್ ರಾಜಿಂದರ್ ನಗರದಲ್ಲಿವೆ.

   ಜುಲೈ 28 ರಿಂದ ಜುಲೈ 31 ರವರೆಗೆ ಸುಮಾರು 185 ಆಸ್ತಿಗಳನ್ನು ಎಂಸಿಡಿ ಸಮೀಕ್ಷೆ ನಡೆಸಿದೆ. ಕಾನೂನಿಗೆ ವಿರುದ್ಧವಾಗಿ ನೆಲಮಾಳಿಗೆಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿದ್ದಕ್ಕಾಗಿ ಸೀಲಿಂಗ್ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.

Recent Articles

spot_img

Related Stories

Share via
Copy link