ಹಿಂದುಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ: ಮುಖ್ಯಮಂತ್ರಿ

ಚಿಕ್ಕಬಳ್ಳಾಪುರ

     ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆಗಬೇಕು ಎನ್ನುವ ಅಭಿಲಾಷೆಯಿಂದ ನಮ್ಮ ಪ್ರಧಾನಿಗಳು ನಿಯಮ ಸರಳಿಕರಣಗೊಳಿಸಿದ್ದರಿಂದ, ಹಿಂದುಳಿದ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಚಿಕ್ಕಬಳ್ಳಾಪುರ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

      ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಅಭಿವೃದ್ಧಿ ಮಾಡಲಾಗಿದೆ. ರಾಮನಗರದಲ್ಲಿಯೂ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು ಎಂದರು.

ಶಂಕರ್ ನಾಗ್ ಕನಸು ನನಸು

      ನಂದಿಬೆಟ್ಟಕ್ಕೆ ರೋಪ್ ವೇ ಆಗಬೇಕೆಂದು ದಿವಂಗತ ನಟ ಶಂಕರನಾಗ್ ಅವರು ಕಂಡ ಕನಸು ಈಗ ನನಸಾಗುತ್ತಿದೆ. ರೋಪ್ ವೇ ಮಾಡಿದರೆ ಪ್ರವಾಸೋದ್ಯಮಕ್ಕೆ ಸಾಕಷ್ಟು ಅನುಕುಲವಾಗುತ್ತದೆ‌. ಈ ಭಾಗದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಂದಿ ಬೆಟ್ಟದ ಪಕ್ಕದ ದೇವಸ್ಥಾನ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಇದೊಂದು ಪ್ರವಾಸಿ ಸರ್ಕಿಟ್ ಆಗಲು ಅನುಕೂಲವಾಗಲಿದೆ ಎಂದರು.

ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ

        ನಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ ಮೂಡಿದೆ‌. ಇದರಿಂದ ನಮ್ಮ‌ಆತ್ಮವಿಶ್ವಾಸ ಹೆಚ್ಚಾಗಿದೆ‌.
ಅಮಿತ್ ಶಾ ಅವರ ಸಭೆಯಲ್ಲಿ ಪ್ರಣಾಳಿಕೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಆರೋಗ್ಯ ಸಚಿವ ಸುಧಾಕರ್ ಅವರು ಪ್ರಾಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ನಮ್ಮದು ಜನತಾ ಪ್ರಣಾಳಿಕೆಯಾಗಲಿದೆ ಎಂದರು.

ಮೀಸಲಾತಿ :ಕಾಂಗ್ರೆಸ್ ಗೆ ಸಹಿಸಲಾಗುತ್ತಿಲ್ಲ*

      ಮೀಸಲಾತಿ ಹೆಚ್ಚಳ ಮಾಡಿರುವುದು ಕಾಂಗ್ರೆಸ್ ನವರಿಗೆ ಸಹಿಸಲಿಕ್ಕೆ ಆಗುತ್ತಿಲ್ಲ. ಹೀಗಾಗಿ ಅವರು ವಿರೋಧ ಮಾಡುತ್ತಿದ್ದಾರೆ. ನಾವು ಯಾವ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆಯೋ ಅದನ್ನು ವಿರೋಧಿಸುತ್ತೇವೆ ಎಂದು ಹೇಳಲಿ.

     ಮುಸ್ಲಿಮರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಅವರನ್ನು ಇಡಬ್ಲುಎಸ್ ವರ್ಗದಲ್ಲಿ ಸೇರಿಸಿದ್ದೇವೆ. ಅಲ್ಲಿ ಶೆ 10% ಮೀಸಲಾತಿ ಇದೆ. ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಆಧಾರದಲ್ಲಿ ಮಿಸಲಾತಿ ಇಲ್ಲ. ಮುಸ್ಲೀಮರಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ. ಧೂಳಿ ನಿಂದ ಆಕಾಶ ಕಾಣಿಸದಂತಾದ ಹಿನ್ನಲೆ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್​ ನೋಡಿ ಆತಂಕಗೊಂಡ ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರು. ಆದರೆ, ಬಳಿಕ ಮತ್ತೊಮ್ಮೆ ಟೇಕ್ ಆಫ್​ ಆಗಿ ಹೆಲಿಕಾಪ್ಟರ್​ ಹಾರಾಟ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ. ಕೆ ಸುಧಾಕರ್​ ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ತೆರಳಲೆಂದು ಹೆಲಿಕಾಪ್ಟರ್​​ ಹತ್ತಿದ್ದರು. ಟೇಕ್​ ಆಫ್​ ಆಗುವ ವೇಳೆಗೆ, ಹೆಲಿಕಾಪಟ್ಟರ್​ ಪ್ಯಾನ್​​ ಗಾಳಿಯಿಂದ ದೂಳು ಎದ್ದಿದೆ. ಆಗ ಚಾಲಕನಿಗೆ ಆಕಾಶ ಕಾಣದ ಹಿನ್ನೆಲೆ ಮತ್ತೆ ಲ್ಯಾಂಡ್​ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ಕೂಡಲೆ ಸ್ಥಳಕ್ಕೆ ತೆರಳುವಷ್ಟರಲ್ಲಿ, ಹೆಲಿಕಾಪ್ಟರ್​ ಮತ್ತೆ ಟೇಕ್​ ಆಫ್​​ ಆಗಿ ಪ್ರಯಾಣ ಬೆಳಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap