ಮೆಡಿಕಲ್ ಕಾಲೇಜುಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಆರೋಗ್ಯ ವಿವಿ….!

ಬೆಂಗಳೂರು

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅನೇಕ ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯ ಸಮಸ್ಯೆ ಇರುವುದು ಮತ್ತೆ ಬೆಳಕಿಗೆ ಬಂದಿದೆ. ಉತ್ತಮ ಸೌಲಭ್ಯ ಒದಗಿಸದ, ಸಿಬ್ಬಂದಿ ಕೊರತೆ ಇರುವ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸದ ರಾಜ್ಯದ 27 ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್​ಎಂಸಿ) ಈ ಹಿಂದೆ ದಂಡ ವಿಧಿಸಿ ಶಾಕ್ ನೀಡಿತ್ತು. ಇದಿಗ ಮತ್ತೆ ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಚಾಟಿ ಬೀಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂದಾಗಿದೆ. 

    ಮೂಲಭೂತ ಸೌಕರ್ಯಕೊರತೆ ಹಾಗೂ ಸರಿಯಾದ ಸೇವೆ ನೀಡದೆ ಕಳ್ಳಾಟವಾಡುತ್ತಿರುವ ಮೆಡಿಕಲ್ ಕಾಲೇಜುಗಳ ವಿರುದ್ಧ ಮತ್ತೆ ಎನ್​ಎಂಸಿಗೆ ವರದಿ ನೀಡಲು ಆರೋಗ್ಯ ವಿಶ್ವವಿದ್ಯಾಲಯ ಮುಂದಾಗಿದೆ. ಈ ಹಿಂದೆ ಎನ್​ಎಂಸಿ ರಾಜ್ಯದ 27 ಮೆಡಿಕಲ್ ಕಾಲೇಜಿಗೆ ನೋಟಿಸ್ ನೀಡಿ ದಂಡ ವಿಧಿಸಿತ್ತು. ಆ ಬಳಿಕ ಕೂಡ ಹಲವು ಮೆಡಿಕಲ್ ಕಾಲೇಜಿಗಳು ಮತ್ತೆ ಕಳ್ಳಾಟವಾಡುತ್ತಿವೆ. ಸಾಕಷ್ಟು ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕೊರತೆ, ಸಿಬ್ಬಂದಿ ಕೊರತೆ ಇದೆ. ಜತೆಗೆ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನೂ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಇತಂಹ ಕಾಲೇಜುಗಳ ವರದಿ ಪಡೆಯಲು ಆರೋಗ್ಯ ವಿವಿ ಮುಂದಾಗಿದೆ. 

ಮೂಲಸೌಕರ್ಯ ಕೊರತೆ ಇರುವ ಕಾಲೇಜುಗಳ ಮೆಡಿಕಲ್ ಸೀಟ್ ಕಡಿತಕ್ಕೆ ಎನ್​ಎಂಸಿಗೆ ವರದಿ ನೀಡಲು ಕೂಡಾ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸಿದ್ಧತೆ ಮಾಡಿದೆ. ಮೂಲಭೂತ ಸೌಕರ್ಯ, ಸಿಬ್ಬಂದಿ ಕೊರತೆ, ಕಳಪೆ ಉಪಕರಣಗಳು, ರೋಗಿಗಳ ದತ್ತಾಂಶಗಳನ್ನು ಸರಿಯಾಗಿ ನಿರ್ವಹಿಸದ ರಾಜ್ಯದ ಮೆಡಿಕಲ್ ಕಾಲೇಜುಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಮುಂದಾಗಿದೆ. ಒಂದೊಮ್ಮೆ ಮತ್ತೆ ಮೆಡಿಕಲ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ ಕಂಡು ಬಂದರೆ, ಮೆಡಿಕಲ್ ಕಾಲೇಜುಗಳ ಸೀಟ್​​​ಗಳಿಗೆ ಎನ್​ಎಂಸಿ ಕತ್ತರಿ ಹಾಕಲಿದೆ. 

ಒಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸೇರಿ ಹಲವು ಖಾಸಗಿ ಕಾಲೇಜುಗಳು ಕನಿಷ್ಠ ಮಾನದಂಡ ಪಾಲನೆ ಮಾಡುತ್ತಿಲ್ಲ. ಹೀಗಾಗಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ರಮಕ್ಕೆ ಮುಂದಾಗಿದೆ. ಇನ್ನಾದರೂ ವೈದ್ಯಕೀಯ ಕಾಲೇಜುಗಳಲ್ಲಿ ಎಲ್ಲೆಲ್ಲಿ ಖಾಲಿ ಹುದ್ದೆ ಇದೆಯೋ ಅವುಗಳನ್ನು ಸರ್ಕಾರ ಭರ್ತಿ ಮಾಡಬೇಕಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳು ಇನ್ನಾದರೂ ಉತ್ತಮ ಮೂಲಸೌಕರ್ಯದ ಕಡೆ ಗಮನಕೊಡಬೇಕಿದೆ.

Recent Articles

spot_img

Related Stories

Share via
Copy link