ಶಂಕಿತ ತಂಡದಿಂದ ವೈದ್ಯ ವಿದ್ಯಾರ್ಥಿಗೆ 22.5ಲಕ್ಷರೂ ಮೋಸ..!

ಮಂಗಳೂರು

        ಶಂಕಿತ ತಂಡವೊಂದು ಸೀಟು ಕೊಡಿಸುವ ನೆಪದಲ್ಲಿ ವೈದ್ಯ ವಿದ್ಯಾರ್ಥಿ ಯೊಬ್ಬನಿಗೆ 22.5 ಲಕ್ಷ ರೂ. ಪಂಗನಾಮ ಹಾಕಿದೆ. ಕಳೆದ ವರ್ಷ ಡಿಸೆಂಬರ್ 16ರಂದು ತನ್ನ ಮಗನಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಮಹಿಳೆಯೊಬ್ಬರು ಕರೆ ಮಾಡಿ ಮೋಸ ಮಾಡಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಆರಂಭದಲ್ಲಿ 50 ಲಕ್ಷದ ಒಳಗಿನ ಸೀಟನ್ನು ಹುಡುಕುತ್ತಿರುವುದಾಗಿ ವಿದ್ಯಾರ್ಥಿಯ ತಂದೆ ತಮಗೆ ಕರೆ ಮಹಿಳೆಗೆ ತಿಳಿಸಿದ್ದಾರೆ. ನಂತರ ಆತನಿಗೆ ಬೇರೊಬ್ಬ ಮಹಿಳೆಯಿಂದ ಕರೆ ಬಂದಿದೆ. ಆಕೆ ಸೀಟಿನ ವಿವರಗಳೊಂದಿಗೆ ಆರಂಭದಲ್ಲಿ 15 ಲಕ್ಷ ರೂಪಾಯಿ ಮತ್ತು ಸೀಟು ಸಿಕ್ಕ ಮೇಲೆ 7.5 ಲಕ್ಷ ರೂಪಾಯಿ ಮೊದಲ ವರ್ಷದ ಶುಲ್ಕವಾಗಿದೆ ಎಂದು ವಿದ್ಯಾರ್ಥಿ ತಂದೆಗೆ ಹೇಳಿದ್ದಾಳೆ.

ಈ ಶುಲ್ಕದಲ್ಲಿ ಹಾಸ್ಟೆಲ್ ಉಚಿತವಾಗಿರುತ್ತದೆ ಎಂದು ಮಹಿಳೆ ತಿಳಿಸಿದ್ದಾಳೆ. ಜೊತೆಗೆ ವಿದ್ಯಾರ್ಥಿಯ ತಂದೆಗೆ ದಾಖಲೆಗಳನ್ನು ವಾಟ್ಸಾಪ್ ಮಾಡಲು ಕೇಳಲಾಗಿದೆ. ಡಿಸೆಂಬರ್ 17 ರಂದು ದೂರುದಾರನು ತನ್ನ ಪತ್ನಿಯ ಬ್ಯಾಂಕ್ ಖಾತೆಯಿಂದ 7.5 ಲಕ್ಷ ರೂ.ಗೆ ಡಿಮ್ಯಾಂಡ್ ಡ್ರಾಫ್ಟ್ ಪಡೆದುಕೊಂಡಿದ್ದಾರೆ. ಜೊತೆಗೆ ದಾಖಲೆಗಳ ಫೋಟೋವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾರೆ.

ಮರುದಿನ ಅವರು ತನ್ನ ಮಗನ ದಾಖಲೆಗಳ ಫೋಟೋಗಳನ್ನು ಕಳುಹಿಸಿದರು. ವಿದ್ಯಾರ್ಥಿಯ ತಂದೆಗೆ ಡಿ.20ರಂದು ಹಿರಿಯ ಅಧಿಕಾರಿಯೊಬ್ಬರಿಂದ ವೈದ್ಯಕೀಯ ಸೀಟು ಕನ್ಫರ್ಮ್ ಆಗಿದೆ ಎಂದು ಕರೆ ಬಂದಿದ್ದು, ಮರುದಿನ ಕಾಲೇಜಿಗೆ ಬರುವಂತೆ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap