ಮೀನಗೊಂದಿ ಶ್ರೀ ಮಲೆ ರಂಗನಾಥ ಸ್ವಾಮಿ ದೇವಾಲಯ : ಜು.26 ರಿಂದ ಶ್ರಾವಣ ಮಾಸದ ಮಹೋತ್ಸವ ಪ್ರಾರಂಭ.

ಮದುಗಿರಿ 

   ಇತಿಹಾಸ ಪ್ರಸಿದ್ಧ ಶ್ರೀ ಮೀನ ಗೊಂದಿ ಮಲೇ ರಂಗನಾಥ ಸ್ವಾಮಿ ದೇವಾಲಯದಲ್ಲಿ ಜು.26 ರಿಂದ ಪ್ರತಿ ಶನಿವಾರ ಶ್ರಾವಣ ಮಾಸದ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು 9 ಮಂದಿ ಬುಡ್ಕಟ್ಟಿನ ಅಣ್ಣತಮ್ಮಂದಿರು ಮನವಿ ಮಾಡಿಕೊಂಡಿದ್ದಾರೆ .

   ಅವರು ಪ್ರತಿಕಾ ಪ್ರಕಟಣೆ ನೀಡಿ ಮಧುಗಿರಿ ತಾಲೂಕಿನ ಬಂದ್ರಹಳ್ಳಿ ತೇರಿನ ಬೀದಿ ಒಲಬು ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಮೊದಲ ಶನಿವಾರ ಜು.26 ರಿಂದ ದೇವಾಲಯದಲ್ಲಿ ಶ್ರೀ ಮೀನಾ ಗೊಂದಿ ಶ್ರೀ ಮಲೆ ರಂಗನಾಥ ಸ್ವಾಮಿ ಗೆ ಪ್ರತಿ ಶ್ರಾವಣ ಶನಿವಾರ ವಿಶೇಷವಾಗಿ ಅಭಿಷೇಕ ಸ್ವಾಮಿಗೆ ವಿಶೇಷ ಅಲಂಕಾರ ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 6 ಗಂಟೆಯವರೆಗೆ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗುದು ಎಂದು ಪ್ರಕಟಣೆಯಲ್ಲಿ 9 ಮಂದಿ ಬುಡ್ಕಟ್ಟಿನ ಅಣ್ಣ-ತಮ್ಮಂದಿರು ತಿಳಿಸುತ್ತಾರೆ .

    ಶ್ರೀ ಮೀನಗೊಂದಿ ಮಲೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮೊದಲನೇ ಶ್ರಾವಣ ಶನಿವಾರ ದೇವದಾಸ್ ಮತ್ತು ಧರ್ಮ ಕರ್ತರ ಕುಟುಂಬದಿಂದ ನಡೆಯುತ್ತದೆ ಎರಡನೇ ಶ್ರಾವಣ ಶನಿವಾರ ಮೊದಲ ಮೂರು ಬುಡಕಟ್ಟುಗಳು ಅಂದರೆ ತೊಂಡೋಟಿ ಚಿಕ್ಕಾಳವಾಟ ಹಾಗೂ ಕೊಡ್ಲಾಪುರ ನಡೆಸುತ್ತಾರೆ ಮೂರನೇ ಶ್ರಾವಣ ಶನಿವಾರ ಚಿಕ್ ಬೆಟ್ಟ ಪುರಭರ ಹಾಗೂ ಗುಟ್ಟೇ ಬುಡುಕಟ್ಟಿನಿಂದ ನಡೆಯುತ್ತದೆ ನಾಲ್ಕನೇ ಶ್ರಾವಣ ಶನಿವಾರ ಬ್ರಹ್ಮದೇವರಹಳ್ಳಿ ವದ್ದೆನಹಳ್ಳಿ ಸೋಂಪುರ ಬುಡುಕಟ್ಟುಗಳಿಂದ ನಡೆಯುತ್ತದೆ ಹಾಗೂ ಕೊನೆ ಅಥವಾ ಐದನೇ ಶ್ರಾವಣ ಶನಿವಾರ ಮುತ್ತ ರಾಯನಹಳ್ಳಿ ಚಾಣಕ್ಯ ಅವರ ತಮ್ಮ ದೇವರಾಜುರವರಿಂದ ನಡೆಯುತ್ತದೆ ಮೇಲಿನ ಐದು ಶನಿವಾರದಂದು ಆಯಾ ಶನಿವಾರದ ಕಾರ್ಯಕರ್ತರುಗಳಿಂದ ದಾಸೋಹ ಏರ್ಪಡಿಸಿರುತ್ತೆ ಮತ್ತು ವಿಶೇಷ ಪೂಜೆ ಇರುತ್ತದೆ ದಯವಿಟ್ಟು 9 ಮಂದಿ ಅಣ್ಣ-ತಮ್ಮಂದಿರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಣ ಶನಿವಾರಗಳಂದು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗಿ ನಮ್ಮ 9 ಮಂದಿಗೆ ಬಲ ತುಂಬಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ.

Recent Articles

spot_img

Related Stories

Share via
Copy link