ಶಿಕ್ಷಕರ ಸಂಘದಿಂದ ಶಿಕ್ಷಣ ಸಚಿವರ ಭೇಟಿ

ಹುಳಿಯಾರು:

ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಿಪಟೂರಿನ ಸಚಿವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಲಾಯಿತು.

ಸಿಆರ್‍ಪಿ, ಬಿಆರ್‍ಪಿಗಳ ಸಮಸ್ಯೆ, ಹಿಂದಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮನವಿ ಮಾಡಿ ತುರ್ತಾಗಿ ನ್ಯಾಯ ಒದಗಿಸಲು ಕೋರಲಾಯಿತು. ಶಿಕ್ಷಣ ಇಲಾಖೆ ಸೇವೆಗಳ ನೇಮಕಾತಿ ನಿಯಮಗಳಿಗೆ ಅಂತಿಮ ನಿಯಮ ಪ್ರಕಟಿಸಿದ್ದು ಸದರಿ ನಿಯಮಗಳಲ್ಲಿ ಸಂಘದ ಮನವಿಯನ್ನು ಹಾಗೂ ತಾವೇ ನಡೆಸಿದ ಸಭೆಯಲ್ಲಿ ಚರ್ಚಿಸಿದ ಯಾವುದೇ ಅಂಶಗಳು ಬಾರದೇ ಇರುವುದು ಸೇವಾ ನಿತರ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗಿದ್ದು, ಶಿಕ್ಷಕರ ಸಂಘ ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಎಂದು ತಿಳಿಸಲಾಯಿತು.

ಅಲ್ಲದೆ ಪ್ರಮುಖ ಬದಲಾವಣೆಗಳೊಂದಿಗೆ ತಕ್ಷಣ ಅಂತಿಮ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ತಂದು ಸೇವಾನಿರತ ಪದವೀಧರ ಶಿಕ್ಷರಿಗೆ ನ್ಯಾಯ ಒದಗಿಸದಿದ್ದರೆ, ಅನಿವಾರ್ಯವಾಗಿ ರಾಜ್ಯದ ಶಿಕ್ಷಕರ ಸಂಘಟನೆ ಹೋರಾಟಕ್ಕೆ ಹೋಗಬೇಕಾಗುತ್ತದೆ ಎಂಬ ಅಂಶವನ್ನು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಆರ್.ಪರಶಿವಮೂರ್ತಿ, ಉಪಾಧ್ಯಕ್ಷರಾದ ಕಾಳೇಗೌಡ, ತಿಪಟೂರು ತಾಲ್ಲೂಕು ಅಧ್ಯಕ್ಷರಾದ ಜಿ.ಆರ್.ಜಯರಾಮ್, ತಿಪಟೂರ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಕೆ.ಪಟ್ಟಾಭಿರಾಮು, ಗುಬ್ಬಿ ತಾಲ್ಲೂಕು ಅಧ್ಯಕ್ಷರಾದ ಗೊರವಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಟಿ.ಪ್ರಕಾಶ್, ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಭೈರಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಕುಣಿಗಲ್ ಅಧ್ಯಕ್ಷರಾದ ಶಿವರಾಮಯ್ಯ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ತಿಪಟೂರು ತಾಲ್ಲೂಕು ಉಪಾಧ್ಯಕ್ಷರಾದ ಸೋಮಶೇಖರಯ್ಯ, ಸಿ.ಎಂ.ಸುಮಾ, ಸಹ ಕಾರ್ಯದರ್ಶಿಗಳಾದ ಸಿ.ಎಸ್.ನಾಗರಾಜು, ಸಾವಿತ್ರಮ್ಮ, ಸಂಘಟನಾ ಕಾರ್ಯದರ್ಶಿ ಬಸವರಾಜು, ಚಿ.ನಾ.ಹಳ್ಳಿ ತಾಲ್ಲೂಕು ನಿರ್ದೇಶಕರಾದ ಬಸವರಾಜು ಪಲ್ಲಕ್ಕಿ, ರಾಜಶೇಖರ್, ಸಿಆರ್‍ಪಿಗಳಾದ ಜಿ.ಕೆ.ನಾಗರಾಜು, ಎನ್.ಪಂಚಾಕ್ಷರಿ ಮಹೇಶ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಮತ್ತು ತಿಪಟೂರು ತಾಲ್ಲೂಕಿನ ನೂರಾರು ಶಿಕ್ಷಕರು ಹಾಜರಿದ್ದರು.

ರಾಜ್ಯ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಿಪಟೂರಿನ ಸಚಿವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link