ಪಾಕಿಸ್ತಾನದಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿ ಹೊಸದೇನಲ್ಲ : ಮೆಹಬೂಬಾ ಮುಫ್ತಿ

ಶ್ರೀನಗರ: 

     ಪಾಕಿಸ್ತಾನದಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿ ಹೊಸದೇನಲ್ಲ. ಆದರೆ, ನೆರೆಯ ದೇಶದಲ್ಲಿನ ಅಸ್ಥಿರತೆ ಮತ್ತು ಅನಿಶ್ಚಿತತೆಯು ಭಾರತದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಗುರುವಾರ ಹೇಳಿದ್ದಾರೆ.

     ಪಾಕಿಸ್ತಾನದ ಆಡಳಿತಾರೂಢ ಪಕ್ಷವು ವಿರೋಧ ಪಕ್ಷದ ವಿರುದ್ಧ ರಾಜಕೀಯವಾಗಿ ಹೋರಾಡುವ ಬದಲು ಅವರನ್ನು ಜೈಲಿಗೆ ಹಾಕಲು ಏಜೆನ್ಸಿಗಳನ್ನು ಬಳಸುತ್ತಿದೆ ಮತ್ತು ‘ದುರದೃಷ್ಟವಶಾತ್ ಅದೇ ಪ್ರಕ್ರಿಯೆಯನ್ನು ಭಾರತದಲ್ಲಿ ಬಳಸಲಾಗುತ್ತಿದೆ’ ಎಂದು ಅವರು ಹೇಳಿದರು.

    ದುರದೃಷ್ಟವಶಾತ್, ಪಾಕಿಸ್ತಾನದಲ್ಲಿ ಏನಾಗುತ್ತಿದೆಯೋ ಅದು ಹೊಸದೇನಲ್ಲ. ಜುಲ್ಫಿಕರ್ ಅಲಿ ಭುಟ್ಟೋ ಅವರಿಂದಲೇ, ಹೊಸ ಸರ್ಕಾರ ಬಂದಾಗಲೆಲ್ಲಾ ಪ್ರತಿಪಕ್ಷಗಳು ಜೈಲು ಪಾಲಾಗುತ್ತವೆ. ಇದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅಲ್ಲಿನ ಅಸ್ಥಿರತೆ ಮತ್ತು ಅನಿಶ್ಚಿತತೆಯು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಈ ರೋಗವು ಹೇಗೋ ನಮ್ಮ ದೇಶಕ್ಕೂ ಅಂಟಿದೆ ಎಂದು ಅವರು ಹೇಳಿದರು.

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಮುಫ್ತಿ, ಇಸ್ಲಾಮಾಬಾದ್‌ನಲ್ಲಿ ಆಡಳಿತ ಪಕ್ಷವು ವಿರೋಧ ಪಕ್ಷದ ನಾಯಕರನ್ನು ಜೈಲಿಗಟ್ಟಲು ಏಜೆನ್ಸಿಗಳನ್ನು ಬಳಸುತ್ತಿದೆ ಎಂದು ಹೇಳಿದರು
     ದುರದೃಷ್ಟವಶಾತ್ ಅದೇ ಪ್ರಕ್ರಿಯೆಯನ್ನು ಇಲ್ಲಿ ಬಳಸಲಾಗುತ್ತಿದೆ. ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಲಾಗಿದೆ ಮತ್ತು ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ,  ಸಂಸತ್ತಿನಿಂದ ಆರು ವರ್ಷ ಅನರ್ಹಗೊಳಿಸಲಾಗಿದೆ. ಪಾಕಿಸ್ತಾನದಲ್ಲಿ ಏನಾಗುತ್ತಿದೆಯೋ ಅದರಂತೆ ನಾವು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿರುವಂತೆ ತೋರುತ್ತಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap