ರಾಜಾಸ್ಥಾನ : ಶಾಲೆಯ ಮೇಲ್ಛಾವಣಿ ಕುಸಿದು 4 ಮಕ್ಕಳು ಸಾವು, ಹಲವರಿಗೆ ಗಾಯ

ರಾಜಸ್ಥಾನ​:

    ಸರ್ಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಹಲವರು ಅವಶೇಷಗಳ ಅಡಿ ಸಿಲುಕಿ ಗಾಯಗೊಂಡ ದುರ್ಘಟನೆ ರಾಜಸ್ವಾನದ ಜಲ್ವಾರ್​​ನ ಪಿಪ್ಲೋಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

   ಮಕ್ಕಳು ಎಂದಿನಂತೆ ಶಾಲೆಗೆ ಹೋಗಿದ್ದು, ಪ್ರಾರ್ಥನೆ ಸಲ್ಲಿಸುವಾಗ ದಿಢೀರ್​ ಮೇಲ್ಚಾವಣಿ ಕುಸಿದಿದೆ. ತಕ್ಷಣಕ್ಕೆ ಶಾಲಾ ಸಿಬ್ಬಂದಿ ಮತ್ತು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳ ರಕ್ಷಣೆಗೆ ಮಂದಾಗಿದ್ದಾರೆ ಎಂದು ಡಂಗಿಪುರ ಪೊಲೀಸ್​ ಠಾಣೆ ಅಧಿಕಾರಿ ವಿಜೇಂದ್ರ ಕುಮಾರ್​ ತಿಳಿಸಿದ್ದಾರೆ.ಸ್ಥಳಕ್ಕೆ ಜಿಲ್ಲಾಡಳಿತ, ಪೊಲೀಸ್ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿದ್ದು, ರಕ್ಷಣಾ ಕಾರ್ಯ ಚುರುಕುಗೊಂಡಿದೆ.

  ಘಟನೆಯಲ್ಲಿ ಗಾಯಗೊಂಡ ಮಕ್ಕಳ ರಕ್ಷಣೆ ಮಾಡಿ ತಕ್ಷಣಕ್ಕೆ ಮನೋಹರ್ಥದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ದುರ್ಘಟನೆಯಲ್ಲಿ, ಗಂಭೀರವಾಗಿ ಗಾಯಗೊಂಡ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಅಲ್ಲದೆ, 15 ಮಕ್ಕಳು ಗಾಯಗೊಂಡಿದ್ದು, 8 ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಜಲ್ವಾರ್​ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

   ಪ್ರಾಥಮಿಕ ಮಾಹಿತಿ ಪ್ರಕಾರ, ಶುಕ್ರವಾರ ಮಕ್ಕಳು ಎಂದಿನಂತೆ ಮನೋಹರ್ಥ ಬ್ಲಾಕ್​ನಲ್ಲಿರುವ ಪಿಪ್ಲೋಡಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಗಮಿಸಿದ್ದಾರೆ. ಶಾಲೆಯಲ್ಲಿದ್ದ ವೇಳೆ ಮೇಲ್ಚಾವಣಿ ಬಿದ್ದಿದೆ. ಶಾಲೆಯಲ್ಲಿ ಒಟ್ಟು 60 ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link