ವಿಧಾನ ಪರಿಷತ್ ಚುನಾವಣಾ ಫಲಿತಾಂಶ

ತುಮಕೂರು:

        ಕಾಂಗ್ರೆಸ್ ಅಭ್ಯರ್ಥಿ ಆರ್. ರಾಜೇಂದ್ರ ಗೆಲುವು

            ತುಮಕೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್. ರಾಜೇಂದ್ರ ರಾಜಣ್ಣ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಆರ್. ರಾಜೇಂದ್ರ ರಾಜಣ್ಣ ಪ್ರಥಮ ಹಾಗೂ ದ್ವಿತೀಯ ಪ್ರಾಶಸ್ತ್ಯ ಮತಗಳು ಸೇರಿ ಒಟ್ಟು 3135 ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.

ಮೊದಲನೇ ಪ್ರಾಶಸ್ತ್ಯ ಮತ ಎಣಿಕೆ ಯಲ್ಲಿ ಪುರಸ್ಕೃತ ಮತಗಳಾದ 5320 ಮತಗಳಲ್ಲಿ ಶೇ. 50ಕ್ಕಿಂತ ಒಂದು ಹೆಚ್ಚು ವರಿ ಮತವನ್ನು ಯಾವ ಅಭ್ಯರ್ಥಿ ಯು ಪಡೆಯಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರು ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಗಳಿಗಿಂತ ಮುನ್ನ ಡೆಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಎಣಿಕೆ ಮಾಡಿ ಉಳಿಕೆ ಅಭ್ಯರ್ಥಿ ಗಳು ಗಳಿಸಿದ್ದ ದ್ವಿತೀಯ ಪ್ರಾಶಸ್ತ್ಯ ಮತವನ್ನು ಹಂಚಿಕೆ ಮಾಡುತ್ತಾ ಅಂತಿಮವಾಗಿ ಉಳಿಕೆ 6 ಅಭ್ಯರ್ಥಿ ಗಳಿಗಿಂತ ಹೆಚ್ಚು ದ್ವಿತೀಯ ಪ್ರಾಶಸ್ತ್ಯ ಪಡೆದ ರಾಜೇಂದ್ರ ವಿಜಯಿಯಾದರು.

ಗೆದ್ದ ಮಗನಿಗೆ ತಾಯಿ ಶಾಂತಲಾ ರಾಜಣ್ಣ ಅವರ ಪ್ರೀತಿ ಯ ಅಪ್ಪುಗೆ

Recent Articles

spot_img

Related Stories

Share via
Copy link
Powered by Social Snap