ಬೆಂಗಳೂರು:
ಬೈಯಪ್ಪನಹಳ್ಳಿ ಕಡೆಗೆ ನಿಧಾನವಾಗಿ ಮುಂದಕ್ಕೆ ಸಾಗಿ ತಪಾಸಣೆಗಾಗಿ ಕೆಲವು ಸ್ಥಳಗಳಲ್ಲಿ ನಿಲ್ಲಿಸಲಾಗಿತ್ತು. 2.5 ಕಿಲೋ ಮೀಟರ್ ದೂರವನ್ನು 47 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು ಎಂದು ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ಅತ್ಯಂತ ನಿಧಾನಗತಿಯ ವೇಗದಲ್ಲಿ ಪ್ರಾರಂಭವಾಯಿತು. ಗರಿಷ್ಠ 15 ಕಿ.ಮೀ. ಮಾರ್ಗಮಧ್ಯದ ಎರಡು ಉಕ್ಕಿನ ಸೇತುವೆಗಳು ಹಾಗೂ ಜ್ಯೋತಿಪುರ ಮೆಟ್ರೋ ನಿಲ್ದಾಣದ ಕೆಳಗೆ ಕೆಲಕಾಲ ನಿಂತಿತ್ತು. ಟ್ರ್ಯಾಕ್‌ಗಳ ಉದ್ದಕ್ಕೂ ಇರುವ ಅಡಚಣೆಗಳಿಗಾಗಿ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿತ್ತು. ಇದು ನಿರ್ಮಾಣ ಅವಶೇಷಗಳು ಮತ್ತು ಸಣ್ಣ ತಂತಿಗಳನ್ನು ಸಹ ಒಳಗೊಂಡಿದೆ ಎಂದು ವಿವರಿಸಿದರು.
ರೈಲು ಓಡಾಟ ಮುಗಿದ ನಂತರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗಿದೆ. ಬೈಯಪ್ಪನಹಳ್ಳಿಯಿಂದ ಹಿಂದಿರುಗುವ ವೇಳೆ ಮಳೆಯಿಂದಾಗಿ ಸ್ಪಷ್ಟ ಗೋಚಾರವಾಗದಿದ್ದ ಕಾರಣ ಸ್ಥಗಿತಗೊಂಡಿತ್ತು. ಹೀಗಾಗಿ ಸಂಪೂರ್ಣವಾಗಿ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.
ಇಂದು ಬೆಳಗ್ಗೆ 9.30ಕ್ಕೆ ಬೈಯಪ್ಪನಹಳ್ಳಿಯಿಂದ ಪೂರ್ಣ ಪ್ರಮಾಣದ ಪರೀಕ್ಷೆ ಆರಂಭವಾಗಲಿದೆ. ಸಿವಿಲ್ ಇಂಟರ್ ಫೇಸ್ ಪರೀಕ್ಷೆಗಳನ್ನು ಇಂದು ನಡೆಸಲಾಗುತ್ತದೆ. ಸಿಗ್ನಲಿಂಗ್ ಪರೀಕ್ಷೆಗಳು ಸುಮಾರು ಒಂದು ತಿಂಗಳ ಕಾಲ ನಡೆಯಲಿವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ