ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು

    ಪ್ರತಿದಿನ ಮೆಟ್ರೋದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಆದರೆ ರೈಲಿನಲ್ಲಿ ಸಂಚಾರ ಮಾಡುವಾಗ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಪಿಲ್ಲರ್​ಗಳಲ್ಲಿ 5 ಜಿ ನೆಟ್ವರ್ಕ್ ಶೆಲ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ನಮ್ಮ ಮೆಟ್ರೋ ಹಂತ-1 ಪೂರ್ವ- ಪಶ್ಚಿಮ, ಉತ್ತರ-ದಕ್ಷಿಣ ಮಾರ್ಗದಲ್ಲಿ, ರೀಚ್-5, ರೀಚ್-6 ಮಾರ್ಗದ ಉದ್ದಕ್ಕೂ ಎಲಿವೇಟೆಡ್ ಸೆಕ್ಷನ್‌ನಲ್ಲಿ 5ಜಿ ಚಿಕ್ಕ ಸೆಲ್​ಗಳನ್ನು ಅಳವಡಿಕೆ ಮಾಡಲು ಟೆಂಡ‌ರ್ ಕರೆಯಲಾಗಿದೆ. ಇ-ಟೆಂಡರ್ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಜನವರಿ 29 ಮಧ್ಯಾಹ್ನ 3 ಗಂಟೆ ಹಾಗೂ ಜನವರಿ 30ರ ಮಧ್ಯಾಹ್ನ 3 ಗಂಟೆ ಆಗಿದೆ.

   ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್​ಸಿಎಲ್ ಚೀಫ್ ಪಿಆಆರ್​​ಒ ಯಶ್ವಂತ್ ಚೌವ್ಹಾಣ್, ಇದರಿಂದ ಮೆಟ್ರೋ ಪ್ರಯಾಣಿಕರಿಗೆ ತುಂಬಾ ಸಹಾಯ ಆಗಲಿದೆ. ಅಕ್ಕಪಕ್ಕದಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೂ 5G ನೆಟ್ವರ್ಕ್ ದೊರೆಯಲಿದೆ ಎಂದಿದ್ದಾರೆ.

   ಮೆಟ್ರೋ ಪಿಲ್ಲರ್​ಗಳಲ್ಲಿ 5G ಶೆಲ್​ಗಳನ್ನು ಅಳವಡಿಸುವುದರಿಂದ, 65 ಎಂಬಿಪಿಎಸ್ ಅಪ್‌ಲೋಡ್ ವೇಗದಲ್ಲಿ ಸೇವೆ 200 ಮೀಟರ್ ವ್ಯಾಪ್ತಿಯಲ್ಲಿ ದೊರೆಯಲಿದೆ. 1.45 ಜಿಬಿಪಿಎಸ್ ಡೌನ್‌ಲೋಡ್, 65 ಎಂಬಿಪಿಎಸ್ ಅಪ್ ಲೋಡ್ ವೇಗದಲ್ಲಿ ನೆಟ್ವರ್ಕ್ ದೊರೆಯಲಿದೆ. ಇದು 4G ಗಿಂತಲೂ ಶೇ 50 ರಷ್ಟು ಅಭಿವೃದ್ಧಿ ಹೊಂದಿದ ನೆಟ್‌ವರ್ಕ್ ಆಗಿದೆ. ಮೆಟ್ರೋ ಪಿಲ್ಲರ್‌ಗಳಲ್ಲಿ 5G ಶೆಲ್ ಅಳವಡಿಸುವುದರಿಂದ ನಮ್ಮ ಮೆಟ್ರೋ ರೈಲಿನಲ್ಲಿ ಪೂರ್ಣವಾಗಿ 5ಜಿ ನೆಟ್‌ವರ್ಕ್ ಸೌಲಭ್ಯ ಸಿಗಲಿದೆ. 

   ಲಭ್ಯವಿರುವ ಮೆಟ್ರೋ ಪಿಲ್ಲರ್, 5ಜಿ ಸೇವೆ ವಿಸ್ತರಣೆ ಮಾಡಲು ಅನುಕೂಲವಾಗುವ ಮಾದರಿಯಲ್ಲಿ ಕಂಪನಿಗಳಿಗೆ ಸಮೀಕ್ಷೆ ನಡೆಸಲು ಸಹ ಅವಕಾಶ ನೀಡಲಾಗಿದೆ. ಈ ಬಗ್ಗೆ ಮೆಟ್ರೋ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ, ಮೆಟ್ರೋದಲ್ಲಿ ಪ್ರಯಾಣಿಕರಿಗೆ ನೆಟ್ವರ್ಕ್ ಸಿಗುವುದಿಲ್ಲ ಎಂಬ ದೂರುಗಳು ಶೀಘ್ರದಲ್ಲೇ ಕೊನೆಗೊಳ್ಳಲಿದೆ.

Recent Articles

spot_img

Related Stories

Share via
Copy link