ಬೆಂಗಳೂರು
ಗಣರಾಜ್ಯೋತ್ಸವ ಅಂಗವಾಗಿ ನಮ್ಮ ಮೆಟ್ರೋ ರೈಲು ಕಾರ್ಯಾಚರಣೆ ಭಾನುವಾರ ರಂದು ಒಂದು ಗಂಟೆ ಬೇಗ ಆರಂಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಭಾನುವಾರ ನಮ್ಮ ಮೆಟ್ರೋ ರೈಲು ಸೇವೆಗಳು ಬೆಳಿಗ್ಗೆ 7 ಗಂಟೆಯ ಬದಲಿಗೆ ಬೆಳಿಗ್ಗೆ 6 ಗಂಟೆಯಿಂದಲೇ ಕಾರ್ಯಾರಂಭ ಮಾಡಲಿವೆ. ನಾಲ್ಕೂ ಟರ್ಮಿನಲ್ಗಳಿಂದ ಮತ್ತು ಮೆಜೆಸ್ಟಿಕ್ನಿಂದ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಹೊರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.
ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಮತ್ತು ಅಂದು ಮಾದಾವರದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ತೆರಳುವವರ ಅನುಕೂಲಕ್ಕಾಗಿ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಹೆಚ್ಚುವರಿಯಾಗಿ 20 ರೈಲುಗಳು ಸಂಚಾರ ಮಾಡಲಿವೆ. ಈ ವೇಳೆ ಸ್ಮಾರ್ಟ್ ಕಾರ್ಡ್, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಅಥವಾ ಕ್ಯೂಆರ್ ಟಿಕೆಟ್ ಬಳಸಬಹುದಾಗಿ ಎಂದು ತಿಳಿಸಿದೆ.
ಲಾಲ್ಬಾಗ್ ಮೆಟ್ರೋ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟೋಕನ್ ಬದಲಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಫ್ಲಾಟ್ 30 ರೂಪಾಯಿಯಂತೆ ಪೇಪರ್ ಟಿಕೆಟ್ ವಿತರಣೆ ಮಾಡಲಾಗುತ್ತದೆ. ಈ ಪೇಪರ್ ಟಿಕೆಟ್ಗಳ ಮೂಲಕ ಲಾಲ್ಬಾಗ್ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ, ಅಸಭ್ಯವಾದ ಫೋಟೋ, ವಿಡಿಯೋ ಮಾಡುವ, ರೀಲ್ಸ್ ಮಾಡುವ, ಜೋರಾಗಿ ಹಾಡು ಹಾಕಿ ತೊಂದರೆ ಕೊಡುವವರಿಗೆ ನಮ್ಮ ಮೆಟ್ರೋ ಬಿಸಿ ಮುಟ್ಟಿಸಿದೆ. ನೂರಾರು ಕೇಸ್ ದಾಖಲಿಸಿ, ಲಕ್ಷಾಂತರ ರುಪಾಯಿ ದಂಡ ವಸೂಲಿ ಮಾಡಿದೆ. ಕಳೆದೊಂದು ವರ್ಷದಲ್ಲಿ 702 ಮಂದಿಯಿಂದ ಬರೋಬ್ಬರಿ 3,17,220 ರೂ. ದಂಡ ವಸೂಲಿ ಮಾಡಿದೆ.
