ಮಿಡಿಗೇಶಿ :
ಕಳೆದ ಎರಡು ವರ್ಷಗಳ ಹಿಂದೆ ದೇವರ ವಿಗ್ರಹ ಕಳವು ಮಾಡಿದ್ದ ಕಳ್ಳರು, ಕಳೆದ ಆರು ತಿಂಗಳ ಹಿಂದೆ ದೇವಸ್ಥಾನದ ಮುಂಭಾಗದ ದನಕರುಗಳು ಕುಡಿಯುವ ನೀರಿನ ತೊಟ್ಟಿಯಲ್ಲಿ ವಿಗ್ರಹವನ್ನು ತಂದಿಟ್ಟಿದ್ದರು. ಈಗ ಮತ್ತೆ ಮಾ.30 ರ ರಾತ್ರಿ ಅದೇ ದೇವಸ್ಥಾನ ಮಿಡಿಗೇಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಕೋಡಿ ಸಮೀಪವಿರುವ ಗ್ರಿಲ್ ಬಾಗಿಲಿಗೆ ಅಳವಡಿಸಿದ್ದ ಚೈನು ಮತ್ತು ಬೀಗ ಒಡೆದು ಒಂದೂವರೆ ಅಡಿ ಎತ್ತರದ, ಹನ್ನೊಂದೂವರೆ ಕೆ.ಜಿ. ತೂಕದ ಪಂಚಲೋಹದ ಸುಮಾರು ಆರು ಲಕ್ಷ ರೂ.ಬೆಲೆ ಬಾಳುವ ವಿಶ್ವರೂಪ ದೇವರ ವಿಗ್ರಹವು ಕಳವಾಗಿದೆ. ಒಂಭತ್ತು ಜೊತೆ ದೇವರಿಗಿಡುವಂತಹ ಬೆಳ್ಳಿಯ ಕಣ್ಣುಗಳು, ಕೋರೆ ಮೀಸೆಗಳು ಹಾಗೂ ಹುಂಡಿಯ ಡಬ್ಬವನ್ನು ಹೊತ್ತೊಯ್ದಿದ್ದಾರೆ. ಘಟನೆ ಬಗ್ಗೆ ಅರ್ಚಕ ಸಿದ್ದಪ್ಪ ಮಿಡಿಗೇಶಿ ಪೋಲಿಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಮಿಡಿಗೇಶಿ ಪೋಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅರ್ಚಕರಿಗೆ ದೇವಸ್ಥಾನಕ್ಕೆ ಭದ್ರವಾದ ಬೀಗದ ವ್ಯವಸ್ಥೆ, ಸಿ.ಸಿ.ಕ್ಯಾಮರಾ ಅಳವಡಿಸಿಕೊಳ್ಳುವಂತೆ ತಿಳಿವಳಿಕೆ ನೀಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ