ಪ್ರಜಾಪ್ರಗತಿ ಫಲಶೃತಿ : ಸ್ಮಶಾನಕ್ಕೆ ಭೂಮಿ ಮಂಜೂರು

  ಮಿಡಿಗೇಶಿ : 

     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಪಂಗೆ ಸೇರಿದ ಕ್ಯಾತಗೊಂಡನಹಳ್ಳಿ ಗ್ರಾಮಸ್ಥರ ಅನುಕೂಲಕ್ಕೆಂದು ಸರ್ಕಾರವು ಸ.ನಂ 21 ರಲ್ಲಿ 4-34 ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿರಿಸಿದೆ. ಸದರಿ ಭೂಮಿಯನ್ನು ಸರ್ಕಾರದ ಸುತ್ತೋಲೆಗಳ ಪ್ರಕಾರವೆ ಸಾಗುವಳಿ ಮಾಡಲಿಕ್ಕೆ ಅವಕಾಶವಿರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.

      1981 ಹಾಗೂ 2003 ರಲ್ಲಿ ಇದೇ ಗ್ರಾಮದ ಗ್ರಾಮ ಸಹಾಯಕ ಹಾಗೂ ಇತರೆ ಮೂವರು ಸೇರಿಕೊಂಡು 3-06 ಎಕರೆ ಭೂಮಿಗೆ ಬಗರ್ ಹುಕುಂ 53 ರ ಅರ್ಜಿ ನಮೂನೆ ಸಲ್ಲಿಸಿದ್ದಾರೆ. ಅಂದಿನ ತಹಸೀಲ್ದಾರ್ (ನಾರಾಯಣಪ್ಪ) ರವರಿಂದ 1.26 ಎಕರೆ ಓರ್ವರಿಗೆ ಮಂಜೂರಾತಿಯನ್ನೂ ಸಹ ಪಡೆದಿದ್ದಾರೆ. ಸದರಿಯವರಿಗೆ ಆಕಾರ್ ಬಂದ್ ದುರಸ್ಥಿಯಾಗಿದೆ. ಇನ್ನುಳಿದ ಮೂವರಿಗೆ ಮಂಜೂರಾತಿ (ಗ್ರಾಂಟ್) ಮಾತ್ರ ಆಗಿದ್ದು, ಈವರೆವಿಗೂ ದುರಸ್ಥಿಯಾಗಿರುವುದಿಲ್ಲ. ಆದರೂ ಉಳಿದವರು ಬೆಳೆಯನ್ನು ಬೆಳೆಯುತ್ತಿದ್ದಾರೆ.

ಉಳಿಕೆ 1.35 ಎಕರೆ ಭೂಮಿಯಲ್ಲಿ ಸಹ ಸದರಿಯವರೆ ಬೆಳೆ ಬೆಳೆಯುತ್ತಿದ್ದು, ಊರಿನಲ್ಲಿ ಯಾರಾದರೂ ಮರಣ ಹೊಂದಿದಲ್ಲಿ ಶವ ಹೂಳಲು ಬಿಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಮೇಲಧಿಕಾರಿಗಳಿಗೆ ಗ್ರಾಮಸ್ಥರು ದೂರನ್ನೂ ಸಹ ಸಲ್ಲಿಸಿದ್ದಾರೆ. ಆದರೆ ಮೇಲಧಿಕಾರಿಗಳು ಈ ವಿಷಯವನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿಲ್ಲ. ಆದ ಕಾರಣ ಗ್ರಾಮಸ್ಥರು ಪ್ರಜಾಪ್ರಗತಿ ಕನ್ನಡ ದಿನ ಪತ್ರಿಕೆಯ ಮೊರೆ ಹೋಗಿದ್ದು, ತಾ. 06-07-2021 ರÀ ಪ್ರಜಾಪ್ರಗತಿ ಪತ್ರಿಕೆಯ ಆರನೆ ಪುಟದಲ್ಲಿ “ಸ್ಮಶಾನದ ಭೂಮಿ ಗ್ರಾಮ ಸಹಾಯಕರ ಕುಟುಂಬದ ಪಾಲು ಕ್ಯಾತಗೊಂಡನಹಳ್ಳಿಯಲ್ಲಿ ಮೃತರ ಶವ ಸಂಸ್ಕ್ಕಾರಕ್ಕೆ ಪರದಾಟ” ಎಂಬ ಶೀರ್ಷಿಕೆಯಡಿ ಸವಿಸ್ತಾರವಾದ ವರದಿ ಪ್ರಕಟಗೊಂಡಿತ್ತು. ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಸದರಿ ಸ್ಮಶಾನದ ಭೂಮಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಕಂದಾಯ ತನಿಖಾಧಿಕಾರಿ, ಗ್ರಾಮಲೆಕ್ಕಿಗರಿಗೆ ಕಟ್ಟು ನಿಟ್ಟಿನ ಆದೇಶವನ್ನು ನೀಡಿದ್ದಾರೆ.

ತಾ||08-07-2021 ರಂದು ಬೆಳಗ್ಗೆ ಆರ್.ಐ ವೇಣುಗೋಪಾಲ್, ಗ್ರಾಮ ಲೆಕ್ಕಿಗ ಕೆಂಪಯ್ಯ, ಪಿ.ಎಸ್.ಐ ನವೀನ್ ಕುಮಾರ್, ಎ.ಎಸ್.ಐ ಪ್ರಕಾಶ್ ಹಾಗೂ ರೆವಿನ್ಯೂ ಇಲಾಖೆಯ ಸಿಬ್ಬಂದಿ ಕ್ಯಾತಗೊಂಡನಹಳ್ಳಿ ಗ್ರಾಮದ ಸ್ಮಶಾನದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಯಲ್ಲಿ ತಾಲ್ಲೂಕು ಸರ್ವೆಯರ್ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರು. ಈಗ ಬೆಳೆ ಬೆಳೆಯಿಟ್ಟಿರುವ ಉಳಿಕೆ 1.35 ಎಕರೆ ಭೂಮಿಯನ್ನು ಗ್ರಾಮಸ್ಥರು ವಶಕ್ಕೆ ಪಡೆದು ಬೇಲಿಯನ್ನು ನಿರ್ಮಿಸಿಕೊಳ್ಳುವಂತೆ ಕಂದಾಯಾಧಿಕಾರಿ ತಿಳಿಸಿರುತ್ತಾರೆ. ಮಂಜೂರಾತಿ ನೀಡಿರುವಂತಹ ಭೂಮಿಯ ಬಗ್ಗೆ ಶುಕ್ರವಾರ ಉಪವಿಭಾಗಾಧಿಕಾರಿಗಳಿಗೆ ಲಿಖಿತ ಮಾಹಿತಿಯನ್ನು ನೀಡುವುದಾಗಿ ಪತ್ರಿಕೆಗೆ ತಿಳಿಸಿರುತ್ತಾರೆ.

ಸದರಿ ಸರ್ವೆ ನಂ 21 ರ 4.34 ಎಕರೆ ಸ್ಮಶಾನದ ಭೂಮಿ ಗ್ರಾಮಸ್ಥರಿಗೆ ಬೇಕಿದ್ದಲ್ಲಿ ಉಪವಿಭಾಗಾಧಿಕಾರಿಗಳವರ ನ್ಯಾಯಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಲ್ಲಿ ಉಪವಿಭಾಗಾಧಿಕಾರಿಗಳವರ ನ್ಯಾಯಾಲಯದ ತೀರ್ಪಿನಿಂದ ಅನುಕೂಲಕರವಾಗಬಹುದೆಂಬ ನಿರೀಕ್ಷೆಯಾಗಿರುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link