ಮಿಡಿಗೇಶಿ :
ಮಧುಗಿರಿ ತಾಲ್ಲೂಕು ಗರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2017-18, 2018-19, 2019-20. 2020-21 ಹಾಗೂ 2021-22ನೆ ಸಾಲಿನ ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿ ದೂರು ನೀಡಲಾಗಿದೆ. ದೂರಿನಲ್ಲಿ ಕೆಲವೊಂದು ಕಾಮಗಾರಿಗಳನ್ನು ಯಂತ್ರಗಳನ್ನು ಬಳಸಿ ಕೈಗೊಂಡಿದೆ. ಕೆಲವು ಕಾಮಗಾರಿಗಳನ್ನು ಕೈಗೊಳ್ಳದೆ ಬಿಲ್ ಡ್ರಾ ಮಾಡಲಾಗಿದೆ. ಕಮ್ಯೂನಿಟಿ ಕಾಮಗಾರಿಗಳನ್ನು ಮಾತ್ರ ಕೈಗೊಂಡು, ವೈಯಕ್ತಿಕ ಕಾಮಗಾರಿಗಳನ್ನು ಡಿಲೀಟ್ ಮಾಡಲಾಗಿದೆ. ಹಾಗಾಗಿ ಕಳೆದ ಐದು ವರ್ಷಗಳಲ್ಲಿ ಅನುಷ್ಠಾನಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಸಮಗ್ರ ತನಿಖೆಗೆ ಒಳಪಡಿಸ ಬೇಕೆಂದು ದೂರು ಸಲ್ಲಿಸಲಾಗಿದೆ.
ಅದರಂತೆ 2017-18, 2018-19, 209-20, 2020-21 ಹಾಗೂ 2021-22ನೆ ಸಾಲಿನವರೆಗೆ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿ ಗಳಲ್ಲಿ ನಿಯಮಗಳು ಉಲ್ಲಂಘನೆಯಾಗಿರುವ ಅಥವಾ ಅವ್ಯವಹಾರ ನಡೆದಿರುವ ಕುರಿತು, ಸಮಗ್ರವಾದ ತನಿಖೆ ನಡೆಸಿ ವರದಿ ಸಲ್ಲಿಸಲು ಈ ಕೆಳಕಂಡಂತೆ ಅಧಿಕಾರಿಗಳ ತಂಡ ರಚಿಸಿ, ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆದೇಶಿಸಿದ್ದಾರೆ.
“ಅಧಿಕೃತ ಜ್ಞಾಪನಾ’’ ಪತ್ರವನ್ನು ಸಹಾಯಕ ಕಾರ್ಯದರ್ಶಿ (ಆಡಳಿತ) ಜಿ.ಪಂ. ತುಮಕೂರು, ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜಕರು ನರೇಗಾ ಯೋಜನೆ ಜಿ.ಪಂ ತುಮಕೂರು, ಸಹಾಯಕ ನಿರ್ದೇಶಕರು (ಗ್ರಾ.ಉ) ತಾ.ಪಂ. ಪಾವಗಡ, ತಾಲ್ಲೂಕು ಸಾಮಾಜಿಕ ಪರಿಶೋಧಕರು, ತಾ.ಪಂ. ಮಧುಗಿರಿ ರವಾನಿಸಲಾಗಿದೆ.
ಪ್ರಜಾಪ್ರಗತಿ ವರದಿ ಫಲಶೃತಿ:
22-07-2021 ರಲ್ಲಿ ಪ್ರಜಾಪ್ರಗತಿಯಲ್ಲಿ “ಗರಣಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಒಂದೇ ಕಾಮಗಾರಿಗೆ ಹಲವು ಬಿಲ್ ಎ.ಸಿ.ಬಿ. ತನಿಖೆಗೆ ಒತ್ತಾಯ’’ ಎಂದೂ ಮತ್ತು ಉದ್ಯೋಗ ಖಾತರಿ ಪರಿಶೀಲನೆಗೆ ಸೂಚನೆ ಯಂತ್ರಗಳ ಬಳಕೆ ಮಾಡುವಂತಿಲ್ಲ ಎನ್ನುವವರು ಈ ದೃಶ್ಯ-ಚಿತ್ರಗಳನ್ನೊಮ್ಮೆ ಗಮನಿಸಲಿ 28-07-2021 ರಂದು, 24-07-2021 ರಂದು ಯಂತ್ರಗಳಿಂದ ನರೇಗಾ ಕಾಮಗಾರಿ ದೂರು ನೀಡಿದವರ ಮೇಲೆ ದೌರ್ಜನ್ಯ ಎಂದೂ ಸುದ್ದಿ ಪ್ರಕಟವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
