ಮಿಡಿಗೇಶಿ :
ಮಿಡಿಗೇಶಿ ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಲೀಹಟ್ಟಿ ಗ್ರಾಮದ ಶ್ರೀ ಚೆನ್ನಕೇಶ್ವರ ಸ್ವಾಮಿಯ ದೇವಾಲಯದ ಬಾಗಿಲುಗಳನ್ನು ಜ.11 ರ ರಾತ್ರಿ ಕಿತ್ತು ಹಾಕಲಾಗಿದೆ. ಆದರೆ ಯಾವುದೇ ದೇವರ ಒಡವೆಗಳು ಕಳುವಾಗಿರುವುದಿಲ್ಲ. ಇದು ಕಳ್ಳತನದ ಪ್ರಯತ್ನವೆ ಅಥವಾ ಇತ್ತೀಚಿನ ದಿನಗಳಲ್ಲಿ ಮಿಡಿಗೇಶಿ ಹೋಬಳಿಯ ಕೆಲವು ದೇವಸ್ಥಾನಗಳಿಗೆ ಕರಡಿಗಳ ದಾಳಿ ಹೆಚ್ಚಿದೆ.
ಕರಡಿಗಳು ಒಳನುಗ್ಗಿ ದೇವರಿಗೆ ದೀಪ ಹಚ್ಚಲು ಸಂಗ್ರಹಿಸಿಟ್ಟಿರುವ ದೀಪದ ಎಣ್ಣೆಯನ್ನು ಕುಡಿದು ಹೋಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆದರೂ ಸಹ ತಾಲ್ಲೂಕಿನ ಅರಣ್ಯಾಧಿಕಾರಿಗಳು ಮಾತ್ರ ಕಾಡು ಪ್ರಾಣಿಗಳ ನಿಯಂತ್ರಣ ಮಾಡದೆ ಗಾಢ ನಿದ್ರೆಯಲ್ಲಿರುತ್ತಾರೆ. ಸದರಿ ಶ್ರೀ ಚೆನ್ನಕೇಶ್ವರ ದೇವಸ್ಥಾನದಲ್ಲಿ ಇರುವ ಹುತ್ತವನ್ನು ಸಹ ಸ್ವಲ್ಪ ಕಿತ್ತು ಹಾಕಲಾಗಿದೆ.
ಈ ಘಟನೆ ಬಗ್ಗೆ ಮಿಡಿಗೇಶಿ ಪೋಲೀಸ್ ಠಾಣೆಗೆ ಅರ್ಚಕ ಶಿವಕುಮಾರ್ ಲಿಖಿತ ದೂರನ್ನು ನೀಡಿರುತ್ತಾರೆ. ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ