ಮಿಡಿಗೇಶಿ :

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಕತ್ತಿರಾಜನಹಳ್ಳಿ ಗ್ರಾಮದ ನರಸಿಂಹಯ್ಯ, ಗಂಗಣ್ಣ, ಲಕ್ಷ್ಮಣ್ ಹಾಗೂ ಪುಟ್ಟಮ್ಮ ಎಂಬುವ ರೈತರುಗಳಿಗೆ ಸೇರಿದ ಜಮೀನುಗಳಲ್ಲಿ ಕಳೆದ ಎರಡು ವರ್ಷಗಳಿಂದೀಚೆಗೆ ಬೆಳೆಸಲಾಗಿರುವ ಹುಣಸೆ, ಮಾವು, ಬೇವಿನ ಸಸಿಗಳಿಗೆ ಫೆ.13 ರಂದು ಬೆಂಕಿ ಬಿದ್ದಿದೆ.
ಸುಟ್ಟಿರುವ ಸಸಿಗಳು ಬ್ರಹ್ಮದೇವರಹಳ್ಳಿ ಕಾವಲ್ ಜಮೀನಿಗೆ ಸೇರಿವೆ. ಸದರಿ ಜಮೀನಿಗೆ ಬಿದ್ದಿರುವ ಬೆಂಕಿಯು ಆಕಸ್ಮಿಕವೊ, ಕಿಡಿಗೇಡಿಗಳಿಂದ ಇಟ್ಟಿರುವ ಬೆಂಕಿಯೋ ಎಂಬುದು ಖಚಿತವಾಗಿಲ್ಲ. ಪೊಲೀಸ್ ತನಿಖೆಯಿಂದಷ್ಟೆ ಸತ್ಯಾಂಶ ಹೊರಬರಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








