ಮಿಡಿಗೇಶಿ :
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೋಲೀಸ್ ಠಾಣಾ ಸರಹದ್ದಿನಲ್ಲಿ, ಮಧುಗಿರಿ ಉಪವಿಭಾಗದ ವ್ಯಾಪ್ತಿಯಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ಕಲ್ಲುಗಣಿಗಾರಿಕೆ ನಡೆಯುತ್ತಿದೆ.
ಗಡಿಭಾಗದ ಗ್ರಾಮಗಳ ಸಮೀಪವಿರುವ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳಿಗೆ ಸಂಬಂಧಿಸಿದ ಜಂಟಿ ಬೆಟ್ಟ-ಗುಡ್ಡ, ಬಂಡೆಗಳನ್ನು ಆಂಧ್ರ ರಾಜ್ಯದವರಿಗೆ ಇಷ್ಟಬಂದಂತಹ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿಕೊಂಡು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಆದರೂ ಸಹ ಆಡಳಿತವರ್ಗ ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜನತೆ ದೂರುತ್ತಿದ್ದಾರೆ.
ಚಂದ್ರಬಾವಿ ಸಮೀಪ ಗಣಿಗಾರಿಕೆ ಮುಗಿಯುತ್ತಾ ಬಂದಿದೆ. ಕಳೆದ ನಾಲ್ಕೈದು ದಿನಗಳಿಂದೀಚೆಗೆ ಮಿಡಿಗೇಶಿ ಗ್ರಾಪಂಗೆ ಸೇರಿದ ಬೆನಕನಹಳ್ಳಿ ಸಮೀಪದ ಸಂತೆಗುಟ್ಟೆಯ ಬಳಿಯ ಗುಡ್ಡದಲ್ಲಿ ಬೃಹದಾಕಾರದ ಗುಂಡುಬಂಡೆಗಳನ್ನು ಜಿಲೆಟಿನ್ ಬಳಸಿ ಸ್ಪೋಟಿಸುತ್ತಿದ್ದಾರೆ. ಇದರಿಂದ ಈ ಭಾಗದ ರೈತರಲ್ಲಿ ಭಯಭೀತಿ ಮೂಡಿದೆ. ಕೋಲಾರ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಸ್ಪೋಟಕ ವರದಿಗಳು ಮಾಸುವ ಮುನ್ನವೇ ರಾಜ್ಯದ ಗಡಿ ಭಾಗದಲ್ಲಿ ಕಲ್ಲಿನ ಗಣಿಗಾರಿಕೆ ನಿಲ್ಲಿಸಲಿ ಎಂದು ಜನತೆ ಒತ್ತಾಯಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ