ಮಿಡಿಗೇಶಿ :
ಮಿಡಿಗೇಶಿ ಜಿಲ್ಲಾ ಪಂಚಾಯತ್ ಕ್ಷೇತ್ರ ವಿಂಗಡಣೆಯು ಅವೈಜ್ಞಾನಿಕವಾಗಿದ್ದು, ಗರಣಿ ಹೆಸರು ಕೈಬಿಡದಿರುವಂತೆ, ಮಿಡಿಗೇಶಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಮುಂದುವರೆಸುವಂತೆ, ಮಿಡಿಗೇಶಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ರೆಡ್ಡಿಹಳ್ಳಿ ಕ್ಷೇತ್ರವೆಂದು ನಾಮಕರಣ ಮಾಡದಿರುವಂತೆ ಮಿಡಿಗೇಶಿ ಗ್ರಾಮದ ನಾಡಕಛೇರಿ ಸಿಬ್ಬಂದಿಗೆ ಮನವಿ ಸಲ್ಲಿಸಲಾಯಿತು.
ಮಿಡಿಗೇಶಿಯು ಹಿಂದಿನಿಂದಲೂ ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿರುತ್ತದೆ. ರಾಜಕೀಯವಾಗಿಯೂ ಹೆಸರನ್ನು ಗಳಿಸಿರುವ ಕ್ಷೇತ್ರವಾಗಿರುತ್ತದೆ ಜೊತೆಗೆ ತಾಲ್ಲೂಕು ಪಂಚಾಯಿತಿ ಕ್ಷೇತ್ರವೂ ಆಗಿರುತ್ತದೆ. ಮಿಡಿಗೇಶಿ ತಾಪಂ ಕ್ಷೇತ್ರಕ್ಕೆ ರೆಡ್ಡಿಹಳ್ಳಿ ತಾಪಂ ಕ್ಷೇತ್ರ ಎಂದು ನಾಮಕರಣ ಮಾಡುವುದನ್ನು ವಿರೋಧಿಸಿ, ಯಥಾವತ್ತಾಗಿ ಈ ಹಿಂದೆ ಇದ್ದ ರೀತಿಯಲ್ಲಿಯೇ ಮಿಡಿಗೇಶಿ ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಉಳಿಸಿಕೊಡಬೇಕು ಎಂದು ಒತ್ತಾಯ ಮಾಡಲಾಯಿತು. ನೂರಾರು ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಾಂಕೇತಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ಬನೂ ಇದೇ ಸಂದರ್ಭದಲ್ಲಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
