1.50 ಕೋಟಿ ರೂ.ಕಾಲೇಜು ಕಟ್ಟಡ ನಿರ್ಮಾಣದ ಹಂತದಲ್ಲೆ ಕಳಪೆ ಕಾಮಗಾರಿ

 ಮಿಡಿಗೇಶಿ : 

      ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ರಾಜ್ಯದ ಜಿಲ್ಲೆಯ ತಾಲ್ಲೂಕಿನ ಹಾಗೂ ಹೋಬಳಿಯ ಮಟ್ಟದಲ್ಲಿನ ಗ್ರಾಮಾಂತರ ಮಕ್ಕಳ ವಿದ್ಯೆಯನ್ನು ಕಲಿಯಲು ದೂರದ ಊರುಗಳಲ್ಲಿನ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಸಾಮಾನ್ಯರ, ಬಡತನದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬಹಳ ತೊಂದರೆ ಹಣದ ಅಭಾವ, ಸಮಯ ಕಾಲಹರಣವಾಗುವುದರಿಂದ ಬಹಳಷ್ಠು ವಿದ್ಯಾರ್ಥಿಗಳವರು ವಿದ್ಯಾಭ್ಯಾಸವನ್ನು ಮೊಟುಕುಗೊಳಿಸುತ್ತಿರುವುದು ಘನ ಸರ್ಕಾರಗಳ ಗಮನಕ್ಕೆ ಬಂದಿದ್ದು ಸರ್ಕಾರಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳವರ ಮುಂದಿನ ವಿದ್ಯಭ್ಯಾಸದ ಅನುಕೂಲಕರಕ್ಕಾಗಿ ಹೋಬಳಿ ಮಟ್ಟದಲ್ಲೂ ಹಾಗೂ ವಿದ್ಯಾರ್ಥಿಗಳು ಹೆಚ್ಚಿಗೆ ಇರುವಂತಹ ಗ್ರಾಮಗಳಲ್ಲೂ ಶಾಲಾ ಕಾಲೇಜುಗಳನ್ನು ನಿರ್ಮಿಸಿಕೊಡುತ್ತಿರುವುದು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿರುವುದು ಶ್ಲಾಘನೀಯವಾಗಿರುತ್ತದೆ. ಆದರೆ ಕೆಲವು ಗ್ರಾಮಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಕೊಠಡಿಗಳ ಕೊರತೆ ಅಥವಾ ಕೊಠಡಿಗಳ ದುರಸ್ಥಿ ಕಾರ್ಯ ಇರುವ ಕಡೆಗಳಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರ ಅಥವಾ ಇನ್ನಿತರ ಸರ್ಕಾರದ ಯೋಜನೆಗಳಲ್ಲಿ ನೂತನ ಕೊಠಡಿಗಳನ್ನ ನಿರ್ಮಿಸಿ ಕೊಡಲು ಸರ್ಕಾರದಿಂದ ಅನುದಾನಗಳನ್ನು ಶಾಸಕರು ಹರಸಾಹಸಪಟ್ಟು ಮುಂಜೂರು ಮಾಡಿಸಿ ಕೊಂಡು ತಂದಿರುತ್ತಾರೆ ಸದರಿ ಅನುದಾನದ ಹಣವನ್ನು ಗುತ್ತಿಗೆದಾರರು ಟೆಂಡರ್ ಮೂಲಕವೇ ಅಥವಾ ಶಾಸಕರ ಅನುಮತಿಯಿಂದಲೂ ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಭಿಸುವುದು ಸರಿಯಷ್ಠೆ, ಸದರಿ ಕಾಮಗಾರಿಗಳ ಪ್ರಾರಂಭಕ್ಕೆ ಮುನ್ನ ಶಾಸಕರಿಂದ ಶಂಕುಸ್ಥಾಪನೆ (ಗುದ್ದಲಿ ಪೂಜೆ) ಮಾಡಿಸುವುದು ಗುದ್ದಲಿ ಪೂಜೆ ಮಾಡುವ ಸಂದರ್ಭದಲ್ಲಿ ಶಾಸಕರು ಉತ್ತಮ ಕಟ್ಟಡ ಗುಣಮಟ್ಟ ನಿಗದಿತ ಸಮಯದ ಎಚ್ಚರಿಕೆಯನ್ನು ತಿಳಿಸಿರುತ್ತಾರೆ.

      ಆದರೆ, ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕಳೆದ ಎರಡು ಮೂರು ತಿಂಗಳುಗಳ ಹಿಂದೆಯಷ್ಟೆ ಸ್ಥಳೀಯ ಶಾಸಕ ಎಂ.ವಿ ವೀರಭದ್ರಯ್ಯನವರು ಒಂದೂವರೆ ಕೋಟಿ ರೂಪಾಯಿಗಳ ಅನುದಾನವನ್ನು ತಂದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದರು.

      ಸದರಿ ಕಟ್ಟಡದ ಕಾಮಗಾರಿಯನ್ನು ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಾರಂಭಿಸಿದ್ದಾರೆ. ಕಾಮಗಾರಿಯು ತಳಪಾಯದಿಂದಲೆ ಕಳಪೆ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಬೇರೆ ಯಾವುದೋ ಕೆಲಸಕ್ಕೆ ಬಳಸಿರುವಂತಹ ಹಳೆಯ ಕಲ್ಲುಗಳನ್ನು, ಗುಣಮಟ್ಟವಿಲ್ಲದ ಮರಳನ್ನು ಬಳಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಕಳಪೆ ಕೆಲಸದ ಬಗ್ಗೆ ಕಾಲೇಜಿನ ಪ್ರಾಂಶುಪಾಲರನ್ನು ಪತ್ರಿಕೆ ವಿಚಾರಿಸಲಾಗಿ ಹಳೆಯ ಕಲ್ಲುಗಳು ಕಟ್ಟಡಕ್ಕೆ ಬಳಸುತ್ತಿರುವುದು ಸರಿಯಲ್ಲ, ಇದು ತಪ್ಪು ಎಂದರು. ಪಿಡಬ್ಲ್ಯುಡಿ ಇಲಾಖೆಯ ಎ.ಇ.ಇ ಹೊನ್ನೇಶಪ್ಪನವರ ಗಮನ ಸೆಳೆದಾಗ, ನನ್ನ ಗಮನಕೆ ಬಂದಿರುವುದಿಲ್ಲ, ಶೀಘ್ರದಲ್ಲಿ ಭೇಟಿ ನೀಡಿ ಪರಿಶೀಲಿಸಿ ಮಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

      ಎಸ್‍ಬಿಸಿ ಕಮಿಟಿ ಸದಸ್ಯರು ಇತ್ತ ಕಡೆ ತಿರುಗಿರುವುದಿಲ್ಲ. ಮಧುಗಿರಿ ತಾಲ್ಲೂಕಿನ ಶಾಸಕ ಎಂ.ವಿ ವೀರಭದ್ರಯ್ಯನವರು ಸರ್ಕಾರದಿಂದ ಅನುದಾನಗಳನ್ನು ತರುತ್ತಾರೆ, ಸದರಿಯವರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನಿಸುವುದು, ತಮ್ಮ ಮೃದು ಧೋರಣೆಯಿಂದ ಕಾಮಗಾರಿಯಲ್ಲಿನ ಕಳಪೆಯು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link