20 ಮತ್ತು 90 ದಿನಗಳ (3ತಿಂಗಳ) ನವಜಾತ ಶಿಶುಗಳಿಗೆ ಯಶಸ್ವಿ ಹೃದಯ ಶ ಚಿಕಿತ್ಸೆ-ಮರುಹುಟ್ಟು
ತುಮಕೂರು:
ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ ಸಮಸ್ಯೆ ಹಾಗೂ ಟ್ರಂಕಸ್ ರೋಗಕ್ಕೆತುತ್ತಾಗಿದ್ದಇಬ್ಬರು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿ, ಆ ಮಕ್ಕಳಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತುಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಸಾ ಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕರಾದ ಡಾ.ಜಿ.ಪರಮೇಶ್ವರ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಹೃದಯರೋಗ ಸಮಸ್ಯೆಯಿಂದ ಬಳಲುತ್ತಿದ್ದ 20 ದಿನಗಳ ಹಸುಗೂಸು ಹೈದರಾಬಾದ್ ನಗರದ ನಿವಾಸಿ.ಟ್ರಂಕಸ್ ರೋಗಕ್ಕೆ ತುತ್ತಾಗಿರುವ 3 ತಿಂಗಳಿನ ಮಗು ಹಾಗೂ ತುಮಕೂರು ಗ್ರಾಮಾಂತರ ಪ್ರದೇಶದ ನಿವಾಸಿ. ಈ ಇಬ್ಬರು ಮಕ್ಕಳಿಗೆ ಆಗಿರುವ ಹೃದಯ ಶಸ್ತ್ರ ಚಿಕಿತ್ಸೆ ಅತೀಸೂಕ್ಷ್ಮವಾಗಿದ್ದು, ಯಶಸ್ವಿಯಾಗಿದೆ .ಮುಂದೆ ಆ ಮಕ್ಕಳ ಭವಿಷ್ಯದಲ್ಲಿ ಬದುಕಿನಬೆಳಕು ಮೂಡಲಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಾಟಿಯಾಗಬಲ್ಲ ಆಧುನಿಕ ಉಪಕರಣಗಳ ಅಳವಡಿಕೆ, ತಜ್ಞ ವೈದ್ಯರತಂಡ ತುಮಕೂರಿನಂತಹ ಪ್ರದೇಶದಲ್ಲಿಯೂ, ಅತೀ ಸೂಕ್ಷ್ಮ ರೀತಿಯ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂಬುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರತಂಡ ಸಾಬೀತು ಪಡಿಸಿದೆ.ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ .
ಸಂಕೀರ್ಣವಾದ ಮತ್ತು ಮಾರಣಾಂತಿಕವಾದ ಸಮಸ್ಯೆಯನ್ನು ಕಂಡುಹಿಡಿದು ಅದನ್ನು ಗುಣ ಪಡಿಸಬಹುದೆಂಬ ಇಲ್ಲಿನ ವೈದ್ಯರ ಸಾಹಸ ಮತ್ತುಕರ್ತವ್ಯ ಪ್ರಜ್ಞೆಯನ್ನು ‘ಕಾರ್ಡಿಯಾಕ್ ಫ್ರಾಂಟಿಡಾ’ ಹಾಗೂ ‘ಸಿದ್ಧಾರ್ಥ ಹಾರ್ಟ್ ಸೆಂಟರ್’ನ ಮುಖ್ಯಸ್ಥರಾದ ಡಾ.ತಮೀಮ್ ಅಹಮ್ಮದ್ ನೇತೃತ್ವದ ವೈದ್ಯ ಸಮೂಹಕ್ಕೆ ಮತ್ತು ತಾಂತ್ರಿಕ ತಜ್ಞರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿರುವ ಡಾ.ಜಿ.ಪರಮೇಶ್ವರ ಅವರು, ಗ್ರಾಮಾಂತರ ಪ್ರದೇಶಕ್ಕೆ ಈ ವೈದ್ಯ ತಂಡದ ಸೇವೆ ಇನ್ನುಷ್ಟು ದೊರೆಯಲಿ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








