ನವದೆಹಲಿ :
ದೇಶದ್ರೋಹದ ಆರೋಪದಡಿ ಮುಂದಿನ 10 ವರ್ಷಗಳ ಕಾಲ ನನ್ನನ್ನು ಜೈಲಿನಲ್ಲಿಡಲು ದೇಶದ ಸೇನಾ ಸಂಸ್ಥೆ ಕುತಂತ್ರ ನಡೆಸುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾರೆ.
ಸೋಮವಾರ ಮುಂಜಾನೆ ಟ್ವೀಟ್ಗಳ ಸರಣಿಯಲ್ಲಿ, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥರು ಹೀಗೆ ಹೇಳಿದರು: “ಹಾಗಾಗಿ ಈಗ ಸಂಪೂರ್ಣ ಲಂಡನ್ ಯೋಜನೆ ಹೊರಬಂದಿದೆ. ನಾನು ಜೈಲಿನೊಳಗೆ ಇದ್ದಾಗ ಹಿಂಸಾಚಾರದ ನೆಪವನ್ನು ಬಳಸಿ, ಅವರು ನ್ಯಾಯಾಧೀಶರ ಪಾತ್ರವನ್ನು ವಹಿಸಿಕೊಂಡಿದ್ದಾರೆ.
ನನ್ನ ಪತ್ನಿಯನ್ನು ಜೈಲಿಗೆ ಹಾಕುವ ಮೂಲಕ ನನ್ನನ್ನು ಹತ್ತು ವರ್ಷಗಳ ಕಾಲ ಒಳಗೆ ಇಡಲು ಕೆಲವು ದೇಶದ್ರೋಹದ ಕಾನೂನನ್ನು ಬಳಸಿಕೊಂಡು ನನ್ನನ್ನು ಅವಮಾನಿಸುವುದು ಯೋಜನೆಯ ಭಾಗವಾಗಿದೆ .”
100 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವ ಇಮ್ರಾನ್ ಖಾನ್ ಅವರು , ಮೊದಲನೆಯದಾಗಿ ಉದ್ದೇಶಪೂರ್ವಕ ಭಯೋತ್ಪಾದನೆಯನ್ನು ಮಾಡುತ್ತಿದ್ದಾರೆ ಎಂದು ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಇದನ್ನು ನೋಡದರೆ ನಮ್ಮ ಕಾರ್ಯಕರ್ತರ ಪರಿಸ್ಥತಿಯೇ ಇದಾದರೆ ಇನ್ನು ಸಾಮಾನ್ಯ ನಾಗರಿಕರ ಸ್ಥಿತಿಯೇನು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ