ಹೊಸಕೋಟೆ : ಗುಲ್ಬರ್ಗದಲ್ಲಿ ಪತ್ತೆಯಾಯ್ತು ಕಳುವಾಗಿದ್ದ ಹಾಲಿನ ಕ್ಯಾಂಟರ್‌

ಹೊಸಕೋಟೆ

    ಹಳ್ಳಿಗಳಲ್ಲಿ ದಿನನಿತ್ಯ ರೈತರ ಬಳಿಯಿಂದ ಹಾಲಿನ ಡೈರಿಯಲ್ಲಿ ಹಾಲು ತುಂಬಿಕೊಂಡು ಹೋಗುವ ಹಾಲಿನ ಕ್ಯಾಂಟರನ್ನ ಕಳ್ಳತನ ಮಾಡಿದ್ದ ಓರ್ವ ಕಳ್ಳ ನನ್ನ ಹೊಸಕೋಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದಂತಹ ಹಾಲಿನ ಕ್ಯಾಂಟರನ್ನ ಕ್ಯಾನ್ ಗಳ ಸಹಿತವಾಗಿ ಆರೋಪಿ ಕಳುವು ಮಾಡಿದ್ದ.

    ಕಳವು ಮಾಡಿದ ಆರೋಪಿ ಗುಲ್ಬರ್ಗ ಜಿಲ್ಲೆಯ ಶಹಪುರ ಮೂಲದ ಪ್ರಶಾಂತ್ ಎಂಬುವವನಾಗಿದ್ದು ಕೆಟ್ಟ ಚಟಗಳಿಗೆ ಹಣ ಸಂಪಾದನೆ ಮಾಡಲು ತನಗೆ ತಿಳಿದಿದ್ದ ಡ್ರೈವರ್ ವೃತ್ತಿಯನ್ನು ಬಳಕೆ ಮಾಡಿಕೊಂಡಿದ್ದ. ದೊಡ್ಡಹುಲ್ಲೂರು ಗ್ರಾಮದಲ್ಲಿ ತನಗೆ ಪರಿಚಯ ಇದ್ದವರ ಬಳಿ ಡ್ರೈವಿಂಗ್ ಕೆಲಸ ಮಾಡುವುದಾಗಿ ನಂಬಿಸಿ ಹಾಲಿನ ಕ್ಯಾನಿನ ಸಮೇತ ಕ್ಯಾಂಟರ್ ರ್ವಾಹನವನ್ನು ಕಳುವು ಮಾಡಿದ್ದ.

     ಕ್ಯಾಂಟರ್ ಕಳುವು ಮಾಡಿದ್ದಂತಹ ಆರೋಪಿ ಪ್ರಶಾಂತ್ ಪೊಲೀಸರಿಗೆ ಯಾವುದೇ ರೀತಿಯ ಸುಳಿವು ಸಿಗದಂತೆ ಚಾಣಾಕ್ಷತನದಿಂದ ಯಾವುದೇ ರೀತಿಯ ಹೆದ್ದಾರಿಯಾ ಟೋಲ್ ಗಳ ಮೂಲಕ ಸಾಗದೆ ದೇವನಹಳ್ಳಿ ದೊಡ್ಡಬಳ್ಳಾಪುರ ಗೌರಿಬಿದನೂರು ಹಿಂದುಪುರ ಪಾವಗಡ ಮಡಚಿರ ಬಳ್ಳಾರಿ ರಾಯಚೂರು ಯಾದಗಿರಿ ಹಳ್ಳಿಯ ರಸ್ತೆಗಳಲ್ಲಿ ಕ್ಯಾಂಟರ್ ಚಲಾಯಿಸಿಕೊಂಡು ಗುಲ್ಬರ್ಗ ತಲುಪಿದ್ದ.

    ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು ಈ ಹಿನಲೆಯಲ್ಲಿ ವಿಶೇಷ ತಂಡವನ್ನ ಸಹ ರಚನೆ ಮಾಡಲಾಗಿತ್ತು. ಕಳುವಾದ ಸ್ಥಳದಿಂದ ಸುಮಾರು 120 ಕಿಲೋಮೀಟರ್ ವರೆಗೆ ರಸ್ತೆಯಲ್ಲಿ ಲಭ್ಯವಿರುವ ಹೋಟೆಲ್ ಗಳು ಡಾಬಾ ಗಳು ಮೆಕಾನಿಕ್ ಶಾಪ್ ಗಳು ಸೇರಿದಂತೆ ವಿವಿಧ ಬಗೆಯ ಸುಮಾರು 60ಕ್ಕೂ 70ಕ್ಕೂ ಹೆಚ್ಚಿನ ಸಿಸಿಟಿವಿ ಫುಲ್ ಪರಿಶೀಲನೆ ಮಾಡಿದ್ರು. ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿಯಾ ಚಹರೆ ವಾಹನದ ವಿವರದ ಮೇಲೆ ಆರೋಪಿಯನ್ನ ಕ್ಯಾಂಟರ್ ಸಮೇತ ಗುಲ್ಬರ್ಗ ಜಿಲ್ಲೆ ಶಾಹಪುರದ ಮೆಕಾನಿಕ್ ಶಾಬ್ಬ ಬಳಿ ಬಂಧಿಸಲಾಯಿತು.

    ಆರೋಪಿಯನ್ನು ದಸ್ತಗಿರಿ ಮಾಡಿ ಕಳವಾಗಿದ್ದಂತಹ ಒಟ್ಟು 10 ಲಕ್ಷ ಮೌಲ್ಯದ ಕ್ಯಾಂಟರ್ ವಾಹನ ಹಾಗೂ ಹಾಲಿನ ಕ್ಯಾನ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap