ಯಮಕನಮರಡಿ:
ಹುಕ್ಕೇರಿ ತಾಲೂಕಿನ ನಾಗನೂರು ಕೆ ಎಂ ಗ್ರಾಮದ ಶ್ರೀ ಕಾಳ ಭೈರವ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಮುಂಜಾನೆ 6 ರಿಂದ 9 ಗಂಟೆವರೆಗೆ ಮಿಶ್ರ ತಳಿ ದನಗಳ ಹಾಲು ಕರೆಯುವ ಸ್ಪರ್ಧೆಯನ್ನು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹುಕ್ಕೇರಿ, ಗ್ರಾಮ ಪಂಚಾಯಿತಿ ನಾಗನೂರು ಕೆಡಿ, ಹಾಲು ಉತ್ಪಾದಕರ ಸಹಕಾರಿ ಸಂಘ (ಕೆ ಎಂ ಎಫ್) ನಾಗನೂರು ಕೆ ಎಮ್ ಮತ್ತು ಶ್ರೀ ಕಾಳಭೈರವ ಹಾಲು ಉತ್ಪಾದಕರ ಸಂಘ ನಾಗನೂರು ಕೆ ಎಂ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಎಚ್ ಎಫ್ ಆಕಳು, ಜರ್ಸಿ ಆಕಳು ಹಾಗೂ ಎಮ್ಮೆ, ಈ ಮೂರು ತಳಿ ದನಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಬೇರೆ ಬೇರೆ ಬಹುಮಾನಗಳನ್ನು ಇಡಲಾಗಿದೆ ಯಾರು ವಿಜೇತರಾಗುತ್ತಾರೆ ಅವರಿಗೆ ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಈ ಭಾಗದ ರೈತರು ಪಾಲ್ಕೊಳ್ಳಬೇಕೆಂದು ಪಶು ವೈದ್ಯಾಧಿಕಾರಿ ಡಾ. ಎಸ್. ಭೀ ಮೋಕಾಸಿ ತಿಳಿಸಿದ್ದಾರೆ.
