ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದ್ದಾರೆ ಮಿಲ್ಕಿ ಬ್ಯೂಟಿ …!

ನವದಹಲಿ:

    ನಟಿಯಾಗಿ ಮಾತ್ರವಲ್ಲದೇ ಐಟಂ ಡ್ಯಾನ್ಸರ್ ಆಗಿಯೂ ತಮ್ಮನಾ ಭಾಟಿಯಾ ಅವರು ಬ್ಯುಸಿ ಆಗಿದ್ದಾರೆ. ಸದ್ಯದಲ್ಲೇ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಲಿದ್ದಾರೆ. ಅಂದರೆ, ಅವರು ಮದುವೆ ಆಗಲಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟ ಆಗಿವೆ. ಅವರು ಬಾಲಿವುಡ್​ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮದುವೆ ಆಗಲು ತಮನ್ನಾ ಮತ್ತು ವಿಜಯ್ ವರ್ಮಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಅವರಿಬ್ಬರು ಈಗ ಹೊಸ ಮನೆಯ ಹುಡುಕಾಟದಲ್ಲಿದ್ದಾರೆ.

    2025ರ ಆರಂಭದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಮದುವೆ ಆಗಲಿದ್ದಾರೆ. ಮದುವೆಗಾಗಿ ಅವರು ಶಾಪಿಂಗ್ ಮಾಡಲು ಆರಂಭಿಸಿದ್ದಾರೆ. ಸಂಸಾರ ನಡೆಸಲು ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸ ಮನೆಯ ಅಗತ್ಯವಿದೆ. ಹಾಗಾಗಿ ಮುಂಬೈನಲ್ಲಿ ಅವರು ಹೊಸ ಮನೆಯ ಹುಡುಕಾಟ ನಡೆಸಿದ್ದಾರೆ. ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದರೂ ಕೂಡ ಅವರು ಎಲ್ಲಿಯೂ ಹೇಳಿಕೆ ನೀಡಿಲ್ಲ. 

   ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಅವರು ತಮ್ಮ ಪ್ರೀತಿಯ ವಿಚಾರವನ್ನು ಗುಟ್ಟಾಗಿ ಇಟ್ಟಿಲ್ಲ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಸಮಾರಂಭಗಳಲ್ಲಿ ಕೈ ಕೈ ಹಿಡಿದು ಬರುವ ಮೂಲಕ ರಿಲೇಷನ್​ಶಿಪ್​ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇನ್ನೇನಿದ್ದರೂ ಅವರು ಹಸೆಮಣೆ ಏರುವುದೊಂದೇ ಬಾಕಿ. 

   2023ರಲ್ಲಿ ಬಿಡುಗಡೆಯಾದ ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ಮೊದಲ ಬಾರಿಗೆ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರು ಜೊತೆಯಾಗಿ ನಟಿಸಿದರು. ತಮನ್ನಾ ಭಾಟಿಯಾ ಅವರಿಗೆ 34 ವರ್ಷ ವಯಸ್ಸು. 38ರ ಪ್ರಾಯದ ವಿಜಯ್ ವರ್ಮಾ ಜೊತೆ ಅವರ ಮದುವೆ ನೆರವೇರಲಿದೆ. ಮದುವೆ ಬಗ್ಗೆ ಈ ಜೋಡಿಯಿಂದಲೇ ಅಧಿಕೃತ ಸುದ್ದಿ ಹೊರಬೀಳಲಿ ಎಂದು ಅಭಿಮಾನಿಗಳು ಕಾದಿದ್ದಾರೆ.

Recent Articles

spot_img

Related Stories

Share via
Copy link