ಜನೌಷಧಿ ಕೇಂದ್ರಕ್ಕೆ ಅನುಮತಿ ನಿರಾಕರಣೆ :ಸಚಿವರಿಂದ ಸ್ಪಷ್ಠನೆ

ಕಲಬುರಗಿ

   ಬಡಜನರಿಗೆ ಅನುಕೂಲ ಆಗಲಿ ಅಂತ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಕಲಬುರಗಿಯಲ್ಲಿ ಟಿವಿ9ಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್  ತಿಳಿಸಿದ್ದಾರೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಕೊಡಬೇಕು. ಸ್ಟಾಕ್ ಇಲ್ಲದಿದ್ದರೂ ತರಿಸಿಕೊಡಬೇಕು. ಹೀಗಾಗಿ ನಾವು ಜನೌಷಧಿ ಕೇಂದ್ರ ಬೇಡ ಎಂದು ಹೇಳುತ್ತಿದ್ದೇವೆ. ಹಳೇ ಪಿಎಂ ಜನೌಷಧಿ ಕೇಂದ್ರಗಳನ್ನು   ರಿನಿವಲ್ ಮಾಡುವುದಿಲ್ಲ. ಬಿಜೆಪಿಯವರು   ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ ಎಂದು ಕಿಡಿಕಾರಿದರು.

    ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಾವುದೇ ಮೆಡಿಕಲ್‌ ಶಾಪ್ ಇರಬಾರದು. ಮೆಡಿಕಲ್ ಶಾಪ್ ಇದ್ರೆ ಬಡವರಿಗೆ ತೊಂದ್ರೆ ಆಗುತ್ತೆ. ಅನಾವಶ್ಯಕ ದುಡ್ಡು ಕೊಟ್ಟು ತೆಗೆದುಕೊಳ್ಳಬೇಕಾಗುತ್ತೆ. ನಾವೇ ಉಚಿತವಾಗಿ ಔಷಧಿ ಕೊಡುತ್ತೇವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಕೊಡಬೇಕು. ಸ್ಟಾಕ್ ಇಲ್ಲ ಅಂದ್ರೂ ತರಿಸಿಕೊಡಬೇಕು. ಹೀಗಾಗಿ ನಾವು ಜನ ಔಷಧಿ ಕೇಂದ್ರ ಬೇಡ ಎನ್ನುತ್ತಿದ್ದೇವೆ. ಸಧ್ಯ ಇರೋ ಮೆಡಿಕಲ್ ಶಾಪ್​ಗಳ ಅವಧಿ ಮುಗಿದ ಮೇಲೆ ರಿನಿವಲ್‌ ಮಾಡೋದಿಲ್ಲ. ಹಳೇ ಪಿಎಂ ಜನ ಔಷಧಿ ಕೇಂದ್ರಗಳನ್ನ ರಿನಿವಲ್ ಮಾಡೋದಿಲ್ಲ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯೋದು ಬಿಡಬೇಕು. ನೆಲದ ಮೇಲೆ ಬಂದು ಬಡವರ ಕಷ್ಟ ನೋಡಿ. ಸುಮ್ಮನೇ ಎಲ್ಲದಕ್ಕೂ ಆರೋಪ ಮಾಡಿದ್ರೆ ಹೇಗೆ? ಎಂದು ಕಲಬುರಗಿಯಲ್ಲಿ ಸಚಿವ ಶರಣಪ್ರಕಾಶ್​​ ಪಾಟೀಲ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

   ಇನ್ನು ಮತ್ತೊಂದೆಡೆ ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಗ್ಯಾರಂಟಿಗಳನ್ನು ಬದಲಾವಣೆ ಮಾಡುವ ಬಗ್ಗೆ ಚಿಂತನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ. ನಕಲಿ BPL ಕಾರ್ಡ್ ರದ್ದತಿ ಮಾಡುವ ಬಗ್ಗೆ ಕ್ರಮ ಕೈಗೊಳ್ತೇವೆ ಎಂದರು.

   ಇನ್ನು ಇದೇ ವೇಳೆ ಗೌರಿ ಲಂಕೇಶ ಹತ್ಯೆ ಆರೋಪಿಯನ್ನ ಪ್ರತಾಪ್ ಸಿಂಹ ಭೇಟಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಒಬ್ಬ ಜನಪ್ರತಿನಿಧಿಯಾದವರು ಆರೋಪಿ ಜೊತೆ ಫೋಟೋ ತೆಗೆಸಿಕೊಳ್ತಾರೆ. ಅಷ್ಟೇ ಏಕೆ ಅವರೇ ತಮ್ಮ ಸಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡ್ತಾರೆಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರತಾಪ್ ಸಿಂಹ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

   ಫೋಟೋ ವೈರಲಾಗುವುದು ಬೇರೆ, ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಹೆಮ್ಮೆಪಡುವುದು ಬೇರೆ. ಕಾರಣಗಳು ಏನೇ ಇರಬಹುದು. ಒಬ್ಬ ಚುನಾಯಿತ ಜನಪ್ರತಿನಿಧಿ ಆದವರು, ಸಂಸ್ಕೃತಿಕ ನಗರದ ರಾಯಭಾರಿ ಎಂದುಕೊಂಡು ಓಡಾಡುವವರು ಇವತ್ತು ಆರೋಪಿ ಜೊತೆ ಓಡಾಡ್ತಾರೆ? ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಿಂದೆ ಇಂತಹ ಸಂಸ್ಥೆ, ಸಂಘಟನೆ ಮತ್ತು ಇಂತಹ ಆಲೋಚನೆಗಳು ಇವೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈಗ ಇದಕ್ಕಿಂತ ದೊಡ್ಡ ಸಾಕ್ಷಿ ಏನು ಬೇಕು. ಈ ರೀತಿ ಹೆಮ್ಮೆ ಪಟ್ಟುಕೊಳ್ಳಲು ಅವರಿಗೆ ನಾಚಿಕೆ ಬರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.