ಹೊಸದಿಲ್ಲಿ:
ಮೀಸಲಾತಿಯ ಲಾಭ ಪಡೆದು ಸಾಮಾನ್ಯ ವರ್ಗದವರ ಜತೆ ಸಮನಾಗಿ ಬೆಳೆದಿರುವ ವ್ಯಕ್ತಿಗಳನ್ನು ಮೀಸಲು ವರ್ಗದಿಂದ ಹೊರಗಿಡುವ ಸಂಬಂಧ ಕಾಲಕಾಲಕ್ಕೆ ಪರಿಶೀಲನೆ ನಡೆಯಬೇಕು. ಅಂದರೆ ಮೀಸಲು ಲಾಭವು ಒಂದು ಪೀಳಿಗೆ ಮಾತ್ರವೇ ಇರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿನ ಅತ್ಯಂತ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲು ರಾಜ್ಯ ಸರಕಾರಕ್ಕೆ ಹಕ್ಕಿದೆ ಎಂದು ತೀರ್ಪು ನೀಡಿದ 6 ನ್ಯಾಯಮೂರ್ತಿಗಳಲ್ಲಿ ಮಿತ್ತಲ್ ಕೂಡ ಒಬ್ಬರು.ಯಾವುದೇ ಮೀಸಲಾತಿ ಇದ್ದರೆ, ಮೊದಲ ಪೀಳಿಗೆಗೆ ಅಥವಾ ಒಂದು ಪೀಳಿಗೆಗೆ ಮಾತ್ರ ಸೀಮಿತವಾಗಿರಬೇಕು. ಕುಟುಂಬದ ಯಾವುದೇ ಪೀಳಿಗೆಯು ಮೀಸಲಾತಿಯ ಪ್ರಯೋಜನ ಪಡೆದುಕೊಂಡು ಉನ್ನತ ಸ್ಥಾನಮಾನವನ್ನು ಸಾಧಿಸಿದ್ದರೆ, ಮೀಸಲಾತಿಯ ಲಾಭವು ತಾರ್ಕಿಕ ವಾಗಿ ಎರಡನೆ ಪೀಳಿಗೆಗೆ ದೊರೆಯಬಾರದು ಎಂದು ಅವರು ತಿಳಿಸಿದ್ದಾರೆ.
ಎಸ್ಸಿ, ಎಸ್ಟಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಭಿನ್ನ ತೀರ್ಪು ನೀಡಿರುವ ನ್ಯಾ| ಬೇಲಾ ಎಂ. ತ್ರಿವೇದಿ, ಒಳಮೀಸ ಲಾತಿ ಯನ್ನು ಕಲ್ಪಿಸುವ ಜವಾಬ್ದಾರಿ ಸಂಸತ್ತಿನದ್ದೇ ಹೊರತು ರಾಜ್ಯ ಗಳದ್ದಲ್ಲ ಎಂದು ಹೇಳಿದ್ದಾರೆ. ಸಂವಿಧಾನದ ಆರ್ಟಿಕಲ್ 341 ಮ¤ತು 342 ಎಸ್ಸಿ, ಎಸ್ಟಿ ಮೀಸಲು ಕಲ್ಪಿಸುವ ಅಧಿಕಾರ ವನ್ನು ರಾಷ್ಟ್ರಪತಿಗೆ ನೀಡಿದೆ. ಈ ಪಟ್ಟಿಗೆ ಯಾವುದೇ ಜಾತಿ, ಜನಾಂಗ, ಬುಡಕಟ್ಟು ಸೇರಿಸುವ ಅಥವಾ ತೆಗೆದು ಹಾಕುವು ದನ್ನು ಕಾನೂನು ಮೂಲಕ ಸಂಸತ್ತು ಮಾಡಬೇಕು ಎಂದು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
