ಬೆಂಗಳೂರು:
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಮತದಾರರ ಗಮನ ಸೆಳೆಯಲು ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದು ಅದರಲ್ಲಿ ಒಂದು ಮತದಾರರಿಗೆ ಧನ್ಯವಾದ ಸಮರ್ಪಣೆ ಎಂಬ ಸೋಗಿನಲ್ಲಿ ಗಿಫ್ಟ್ ನೀಡುತ್ತಿದ್ದಾರೆ. ಈಗಾಗಲೇ ರಾಜ್ಯ ಹಲವು ಕ್ಷೇತ್ರಗಳಲ್ಲಿ ಸೀರೆ, ಕುಕ್ಕರ್ ಹಾಗೂ ಹಣ ಸೇರಿದಂತೆ ವಿವಿಧ ವಸ್ತುಗಳು ವಿಜೃುಂಭಿಸುತ್ತಿದ್ದು ಈ ಗ ಹೊಸ ಸಂಪ್ರದಾಯಕ್ಕೆ ಚಾಮರಾಜಪೇಟೆ ಶಾಸಕರು ನಾಂದಿ ಹಾಡಿದ್ದಾರೆ.
ಹೌದು ಶಾಸಕರು , ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿಕೆ ಮಾಡಿದ್ದಾರೆ ಇನ್ನು ಇದು ಮೇಲ್ನೋಟಕ್ಕೆ ಚುನಾವಣೆಗೆ ಹಂಚಿದ್ದಾರೆ ಎನ್ನುವಂತಿದ್ದರೂ ಸಹ ಇದು ನಿಜವಾಗಿಯೂ ಜಗಜೀವನ್ ರಾಮ್ ನಗರ ವಾರ್ಡ್ ಕಚೇರಿಯಲ್ಲಿ 16 ಜನ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಕಾರ್ಯಕರ್ತರಿಗೆ ಉಮ್ರಾ (ಮೆಕ್ಕಾಕ್ಕೆ ಇಸ್ಲಾಮಿಕ್ ಯಾತ್ರೆ) ಆಯೋಜನೆ ಮತ್ತು ಪ್ರತಿಯೊಬ್ಬರಿಗೂ ಸೌದಿ ರಿಯಾಲ್ ವಿತರಿಸಿದರು.
ಸೌದಿ ಅರೇಬಿಯಾದ 500 ರಿಯಾಲ್ಸ್ ಮುಖಬೆಲೆ ನೋಟುಗಳ ಹಂಚಿಕೆ ಮಾಡಿದ್ದು, 500 ರಿಯಾಲ್ಸ್‌ಗೆ ಭಾರತದಲ್ಲಿ 11,034 ರೂಪಾಯಿ ಮೌಲ್ಯ ಇದೆ. ಹಣದ ಜೊತೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ಅನ್ನು ಸಹ ಶಾಸಕ ಜಮೀರ್ ನೀಡಿದ್ದಾರೆ. ನಂತರ ತುಮಕೂರು ಜಿಲ್ಲೆಯ ಸಿರಾ ಪಟ್ಟಣಕ್ಕೆ ಭೇಟಿ ನೀಡಿದ ಅವರು 26 ಯಾತ್ರಿಕರಿಗೆ ಸೌದಿ ರಿಯಾಲ್ 500 ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
