ಗುಬ್ಬಿ:
ಸಂಘಟನೆಯ ಹೆಸರಿನಲ್ಲಿ ಅಮಾಯಕ ರೈತರಿಂದ ದುಡ್ಡು ಹೊಡೆಯುತ್ತಿರುವವರಿಗೆ ವಾಸಣ್ಣ ಖಡಕ್ ಎಚ್ಚರಿಕೆ
ಇಂದು ಗುಬ್ಬಿಯ ತಾಲೂಕು ಕಚೇರಿಯ ಮುಂಬಾಗದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದವತಿಯಿಂದ ನೆಡೆಯುತ್ತಿದ್ದ ಮುಷ್ಕರದ ಸ್ಥಳಕ್ಕೆ ಬಂದ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ನಕಲಿ ರೈತರ ಮೇಲೆ ಹರಿಹಾಯ್ದರು. ಬಡ ರೈತರನ್ನು ಹಾಗೂ ಹೆಣ್ಣು ಮಕ್ಕಳನ್ನು ಜಮೀನು ಮಂಜೂರು ಮಾಡಿಸುತ್ತಿವೆಂದು ತುರುವೇಕೆರೆ, ದಂಡಿನ ಶಿವರ, ಹಾಗೂ ದೂರದ ಕೇರಳ ಕಾಸರಗೋಡಿನಿಂದೆಲ್ಲಾ ಅರ್ಜಿ ಹಾಕಿಸಿ ಒಂದು ಅರ್ಜಿಗೆ 3 ಸಾವಿರಕ್ಕೂ ಹೆಚ್ಚು ಹಣ ಪಡೆಯುತ್ತಿದ್ದಾರೆಂಬ ಸುದ್ದಿ ತಿಳಿಯುತ್ತಲೇ ಪಟ್ಟಣ ಪಟ್ಟಣಪಂಚಾಯ್ತಿಯ ಆಯವ್ಯಯ ಸಭೆಯಲ್ಲಿ ಇದ್ದ ಶಾಸಕರು ಪ್ರತಿಭಟನಾ ಸ್ಥಳಕ್ಕೆ ಬಂದು ಮೊದಲು ರೈತರ ಉರು ಯಾವುದೆಂದು ವಿಚಾರಿಸಿದರು ನಂತರ ಅಲ್ಲೇ ಇದ್ದ ರಾಜ್ಯ ಪ್ರಾಂತ್ಯ ರೈತ ಸಂಘದ ಯಶವಂತ್, ಸುಬ್ರಮಣ್ಯ ರ ಮೇಲೆ ಹರಿಹಾಯ್ದು ರೈತರ ದಿಕ್ಕು ತಪ್ಪಿಸುತ್ತಿರುವ ನಿಮ್ಮಮೇಲೆ ಪೊಲೀಸರಿಗೆ ದೂರು ಕೊಡುತ್ತೇನೆಂದರು
ನಂತರ ಮಾತನಾಡಿದ ಅವರು ಈಗಾಗಲೇ ನಮ್ಮ ತಾಲೂಕಿನಲ್ಲಿ ಸಾವಿರಾರರು ಅರ್ಜಿಗಳು ಬಾಕಿ ಇದ್ದು,ಅದಕ್ಕೆ ಸರ್ಕಾರ ಕೆಲವು ನಿಯಮಗಳನ್ನು ಮಾಡಿದೆ ಅದರ ಪ್ರಕಾರವೇ ನಾವು ಭೂಮಿ ನೀಡಬೇಕು ಎಂದರು, ಅರಣ್ಯ ಭೂಮಿ, ಸರ್ಕಾರಿ ಗೋಮಾಳ, ಹಾಗೂ ಗುಂಡು ತೋಪುಗಳಲ್ಲಿ ಜಮೀನು ಕೊಡುವಹಾಗಿಲ್ಲ ಇದಕ್ಕೆ ಉಚ್ಛ ನ್ಯಾಯಾಲಯದ ಆದೇಶವಿದೆಯೆಂದರು,
ಅರ್ಜಿ ಹಾಕಲು ಈಗಾಗಲೇ ಸಮಯ ಮುಗಿದಿದ್ದು ಈಗ ಬರುವ ಅರ್ಜಿಗಳನ್ನು ನಾವು ಪುರಸ್ಕರಿಸುವಂತಿಲ್ಲ ಎಂದರು, ಅರ್ಜಿದಾರ ನಲವತ್ತು ವರ್ಷ ವಯಸ್ಸಿನವನಾಗಿರಬೇಕು, ಅವನು ಆ ಜಮೀನನ್ನು ಉಳುಮೆ ಮಾಡುತ್ತಿರಬೇಕು ಹೀಗೆ ಹತ್ತು ಹಲವು ನಿಬಂಧನೆಗಳು ಇದ್ದು ಈ ಪ್ರಕಾರವೇ ನಾವು ಮಂಜೂರು ಮಾಡಬೇಕು ಎಂದು ಸಂಕ್ಷಿಪ್ತವಾಗಿ ತಿಳಿಸಿದ ಶಾಸಕರು ಬೇರೆ ತಾಲೂಕು ಹಾಗೂ ಬೇರೆ ರಾಜ್ಯದವರಿಗೆ ಕೊಡಲು ನಮ್ಮಲ್ಲಿ ಭೂಮಿಯೇ ಇಲ್ಲವೆಂದರು,
ತಕ್ಷಣ ಸ್ಥಳದಲ್ಲಿ ನೆಡೆಯಬಹುದಾದ ಬೆಳವಣಿಗೆಯನ್ನು ಗಮನಿಸಿದ ಪೊಲೀಸರು ಗುಬ್ಬಿ ಸಬ್ ಇನ್ಸ್ ಪೆಕ್ಟೇರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಕಾರರನ್ನು ಚದುರಿಸಿದರು,
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷೇ ಮಮತಾ ಶಿವಪ್ಪ, ಹಿರಿಯ ಸದಸ್ಯ ಸಿ ಮೋಹನ್, ಕುಮಾರ್, ರೇಣುಕಪ್ರಸಾದ್, ರಂಗಸ್ವಾಮಿ, ಸಾದಿಕ್, ಆನಂದ್,ಶೋಕತ್ ಆಲಿ,ಆಯಿಷಾ ಬಾನು, ಮಹಾಲಕ್ಷ್ಮಿ,ಹಾಗೂ ಇತರರು ಇದ್ದರು
