ಕುಣಿಗಲ್ :
ಸಹಕಾರ ಸಂಘಗಳು ಅನ್ನದಾತನ ಜೀವನಾಡಿ, ಸಮಾಜದ ಕಟ್ಟ ಕಡೆಯ ರೈತನ ಅಭಿವೃದ್ದಿಯಲ್ಲಿ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿವೆ, ಹಾಗಾಗಿ ತಾಲೂಕಿನ ಸಹಕಾರ ಸಂಘಗಳಿಂದ ಹೆಚ್ಚಿನ ಸಾಲ. ಸೌಲಭ್ಯ ನೀಡುವಂತೆ ಸಹಕಾರ ಸಚಿವರಲ್ಲಿ ಮನವಿ ಮಾಡಿದ್ದೇನೆ ವಿನಹ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಶಾಸಕ ಡಾ.ಹೆಚ್. ಡಿ.ರಂಗನಾಥ್ ಸ್ಪಷ್ಟಪಡಿಸಿದರು,
ಶನಿವಾರ ತಾಲೂಕಿನ ಹುಲಿಯೂರುದುರ್ಗದಲ್ಲಿ ಮೂರು ಕೋಟಿ ರೂ ವೆಚ್ಚದ ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು,
ತಾಲೂಕಿಗೆ ಮಲತಾಯಿ ಧೋರಣೆ : ಸಹಕಾರ ಸಂಘಗಳು ರೈತನ ಬೆನ್ನೆಲುಬು, ರೈತನ್ನು ಯಾವುದೇ ವಾಣಿಜ್ಯ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ, ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿನ ಸಹಕಾರ ಸಂಘಗಳಿಗೆ ಡಿಸಿಸಿ ಬ್ಯಾಂಕ್‌ನ ಮೂಲಕ ಸಾಲ ಸೌಲಭ್ಯ ಒದಗಿಸಿ ಅನ್ನದಾತನ ಕಷ್ಟಕ್ಕೆ ಸ್ಪಂಧಿಸುತ್ತಿದೆ ಆದರೆ ಸಹಕಾರ ಸಂಘ ಇಲಾಖೆಯು ಕುಣಿಗಲ್ ತಾಲೂಕಿನ ಸಹಕಾರ ಸಂಘಗಳಿಗೆ ಸಮರ್ಪಕವಾಗಿ ಸಾಲ ಸೌಲಭ್ಯ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಇದರಿಂದ ಸಹಕಾರ ಸಂಘಗಳನ್ನು ನಂಬಿಕೊಂಡಿರುವ ರೈತರಿಗೆ ಅನ್ಯಾಯವಾಗಿದೆ ಈ ಸಂಬಂಧ ವಿಧಾನಸಭೆ ಅಧಿವೇಶನದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಗಮನ ಸೆಳೆದಿದ್ದೇನೆ ಇದರಲ್ಲಿ ಯಾವುದೇ ದುರುದ್ದೇಶವಿಲ್ಲ, ಸಚಿವರು ನಮ್ಮ ಪಕ್ಷದ ಹಿರಿಯ ಮುಖಂಡರು, ನಮಗೆ ಮಾರ್ಗದರ್ಶಕರು ಆಗಿರುವರು ಡಿಸಿಸಿ ಬ್ಯಾಂಕ್ ಹೆಚ್ಚು ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ಶಾಸಕರು ಪ್ರಶ್ನಿಸಿದರು,
ಒಂದೇ ಮನೆತನದ ಕಪಿಮುಷ್ಠಿಯಲ್ಲಿ ಸಂಘಗಳು : ತಾಲೂಕಿನಲ್ಲಿ ಪಿಎಲ್‌ಡಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಕಳೆದ ೪೦ ವರ್ಷದಿಂದ ಒಂದು ಕುಟುಂಬದ ಕಪಿಮುಷ್ಠಿ ಹಿಡಿತದಲ್ಲಿ ಇವೆ, ಆ ಕುಟುಂಬಕ್ಕೆ ಬೇಕಾದವರಿಗೆ ಷೇರು ನೀಡಿ , ಆ ಕುಟುಂಬದವರೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ, ತಾಲೂಕಿನಲ್ಲಿ ಇನ್ನು ಸಾಕಷ್ಟು ರೈತರು ಇರುವರು ಅವರಿಗೆ ಹೊಸ ಷೇರು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು, ರೈತರಿಗೆ ಸಾಲ ಸೌಲಭ್ಯ ನೀಡಿ ಅತನ ಅಭಿವೃದ್ಧಿಗೆ ಶ್ರಮಿಸುವಲ್ಲಿ ಆ ಕುಟುಂಬವು ವಿಫಲಗೊಂಡಿದೆ ಎಂದು ದೂರಿದರು, ರಾಜಕೀಯಕ್ಕೆ ಆಕಸ್ಮಿಕ : ನಾನು ರಾಜಕೀಯಕ್ಕೆ ಬರಬೇಕು ಅಂದು ಕೊಂಡಿರಲಿಲ್ಲ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿರುವೆ ಈ ನಿಟ್ಟಿನಲ್ಲಿ ಮತದಾರರು ನನ್ನನು ಎರಡನೇ ಭಾರಿ ಶಾಸಕರಾಗಿ ಮಾಡಿದ್ದಾರೆ, ಈ ನಿಟ್ಟಿನಲ್ಲಿ ಜನರ ಸಮಸ್ಯೆ ಸ್ಪಂಧಿಸಿ, ಹಾಗೂ ಮತದಾರರ ಋಣ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು,
ಡಿಸಿಸಿ ಬ್ಯಾಂಕ್‌ನಿಂದ ನಮ್ಮ ತಾಲೂಕಿನ ಸಹಕಾರ ಸಂಘಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಸಿಕ್ಕಿದೆ ಎಂದು ಬಿಜೆಪಿ, ಜೆಡಿಎಸ್(ಎನ್‌ಡಿಎ) ಮುಖಂಡರು ಸಹಕಾರ ಸಚಿವರ ಮತ್ತು ನಮ್ಮ ಪಕ್ಷದ ಪರವಾಗಿ ಮಾತನಾಡಿದ್ದಾರೆ, ಅದನ್ನು ನಾನು ಸ್ವಾಗತಿಸುತ್ತೇನೆ, ಮುಂದಿನ ದಿನದಲ್ಲಿ ಅವರ ಸಹಕಾರ ಬೇಕಾಗಿದೆ ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷರಾದ ಬೀಚನಹಳ್ಳಿ ಶ್ರೀನಿವಾಸ್, ತಬಸುಮ್‌ಫಾತೀಮ, ಪಿಡಿಓ ಶ್ರೀಧರ್, ಸದಸ್ಯ ಹೆಚ್.ಎನ್. ನಟರಾಜು, ತಾ.ಪಂ ಮಾಜಿ ಸದಸ್ಯ ಅಲ್ಲಾಬಕಾಶ್,
