ಎಂಎಂ- ಹಿಲ್ಸ್ ವನ್ಯಜೀವಿ ಅಭಯಾರಣ್ಯದಲ್ಲಿ ಪೊಲೀಸ್ ಚೆಕ್-ಪೋಸ್ಟ್ ಸ್ಥಾಪಿಸಲು ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು: 

    ಸಾಕಷ್ಟು ಪ್ರಯತ್ನಗಳ ನಂತರ, ರಾಜ್ಯ ಸರ್ಕಾರ ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಪೊಲೀಸ್ ಚೆಕ್-ಪೋಸ್ಟ್ ರಚಿಸಲು ಆದೇಶ ಹೊರಡಿಸಿದೆ.ಹೆಚ್ಚುತ್ತಿರುವ ಅಪರಾಧಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯ ಅರಣ್ಯ ಇಲಾಖೆ ಜೂನ್‌ನಲ್ಲಿ ಈ ಪ್ರಸ್ತಾವನೆ ಮಾಡಿತು. ನವೆಂಬರ್ 28 ರಂದು ಚೆಕ್-ಪೋಸ್ಟ್ ಸ್ಥಾಪಿಸಲು ಆದೇಶಗಳನ್ನು ಹೊರಡಿಸಲಾಗಿದೆ.

    ರಾಜ್ಯದ ಅರಣ್ಯ ಪ್ರದೇಶದಲ್ಲಿ ಸ್ಥಾಪಿತವಾಗುತ್ತಿರುವ ಮೊದಲ ಪೊಲೀಸ್ ಚೆಕ್-ಪೋಸ್ಟ್ ಇದಾಗಿದೆ. ಬಂಡೀಪುರ ಹುಲಿ ಮೀಸಲು ಪ್ರದೇಶದ ಮಧೂರ್‌ ನಲ್ಲಿ ಚೆಕ್ ಪೋಸ್ಟ್ ಸ್ಥಾಪನೆಯಾಗುವ ಸಾಧ್ಯತೆಯಿದೆ, ಪೊಲೀಸ್ ಮತ್ತು ಅರಣ್ಯ ಇಲಾಖೆ ಚೆಕ್-ಪೋಸ್ಟ್‌ಗಳು ಪರಸ್ಪರ ಸ್ವಲ್ಪ ದೂರದಲ್ಲಿವೆ.

    ಆದರೆ ಬೇಟೆಯಾಡುವ ಘಟನೆಗಳು, ಗಡಿಯಾಚೆಗಿನ ಅಪರಾಧಗಳು ಮತ್ತು ವನ್ಯಜೀವಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಂಎಂ ಹಿಲ್ಸ್‌ನಲ್ಲಿ ಒಂದ ಪೊಲೀಸ್ ಠಾಣೆಯ ಅಗತ್ಯವಿತ್ತು. ವಿಷಪ್ರಾಶನದಿಂದಾಗಿ ಐದು ಹುಲಿಗಳ ಸಾವು, ಹುಲಿಯ ಶವ ಪತ್ತೆ. ಚಿರತೆಯ ಸಾವು ಮತ್ತು ಇತರ ಅಪರಾಧಗಳು ಹೆಚ್ಚಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವ ಬೇಡಿಕೆ ಉತ್ತುಂಗಕ್ಕೇರಿತು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಹೇಳಿದರು. ಸರ್ಕಾರದ ಆದೇಶದ ಪ್ರಕಾರ, ಪಾಲಾರ್ ವನ್ಯಜೀವಿ ವಲಯದಲ್ಲಿ ಗೋಪಿನಾಥಮ್ ಮತ್ತು ಪಾಲಾರ್ ಭೇಟಿಯಾಗುವ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಚೆಕ್-ಪೋಸ್ಟ್ ಸ್ಥಾಪಿಸಲಾಗುವುದು. ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಿಗೆ ಗೇಟ್‌ಗಳ ವಿನ್ಯಾಸ ಮತ್ತು ಗಾತ್ರವನ್ನು ವಿವರಿಸುವ ಮತ್ತು ಚೆಕ್-ಪೋಸ್ಟ್ ಮಾಡಲು ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಆದೇಶಗಳನ್ನು ಹೊರಡಿಸಲಾಗಿದೆ.

   ಪೊಲೀಸ್ ಮತ್ತು ಅರಣ್ಯ ಇಲಾಖೆ ಒಟ್ಟಾಗಿ ಕೆಲಸ ಮಾಡುತ್ತಿದ್ದರೂ, ತಳ ಮಟ್ಟದಲ್ಲಿ ಸಮನ್ವಯವು ಒಂದು ಸವಾಲಾಗಿದೆ. ಈ ಸಂದರ್ಭದಲ್ಲಿ, ಹೆಚ್ಚುತ್ತಿರುವ ಅಂತರರಾಜ್ಯ ಮತ್ತು ಗಡಿಯಾಚೆಗಿನ ವಿವಾದದಿಂದಾಗಿ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ.

    ಚೆಕ್-ಪೋಸ್ಟ್ ನಿರ್ಮಾಣ ಮಾಡುವುದರಿಂದ ವನ್ಯಜೀವಿ ಅಪರಾಧಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ. ಚೆಕ್-ಪೋಸ್ಟ್ ಅನ್ನು ಪೊಲೀಸರು ನಿರ್ವಹಿಸುತ್ತಾರೆ, ಆದರೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯಲ್ಲಿ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಎಲ್ಲಾ ಅರಣ್ಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ, ಚೆಕ್-ಪೋಸ್ಟ್ ಜಾಗರೂಕತೆಯನ್ನು ಸುಧಾರಿಸಲು ಮಾತ್ರ ಸಹಾಯ ಮಾಡುತ್ತದೆ ಎಂದು ಅಧಿಕಾರಿ ಹೇಳಿದರು.

   ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬಂಡೀಪುರ ಹುಲಿ ಮೀಸಲು ಮತ್ತು ಕಾಳಿ ಹುಲಿ ಮೀಸಲು ಪ್ರದೇಶದಿಂದ ಇದೇ ರೀತಿಯ ಚೆಕ್-ಪೋಸ್ಟ್‌ಗಳಿಗೆ ಬೇಡಿಕೆಗಳಿದ್ದವು, ಆದರೆ ಹೆಚ್ಚುತ್ತಿರುವ ವನ್ಯಜೀವಿ ಘಟನೆಗಳು, ಕಾಡುಗಳ ಒಳಗೆ ಜನರ ಉಪಸ್ಥಿತಿ ಮತ್ತು ಇತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಎಂಎಂ ಹಿಲ್ಸ್‌ಗೆ ಆದ್ಯತೆ ನೀಡಲಾಗಿದೆ.

Recent Articles

spot_img

Related Stories

Share via
Copy link