ಎಂ.ಎನ್.ಕೋಟೆ :
ಗುಬ್ಬಿ ತಾಲ್ಲೂಕಿನ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಮೂರನೇ ದಿನವೂ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣೆ ಅಧಿಕಾರಿ ಶಶಿಧರ್ ಡಿ.ಆರ್. ತಿಳಿಸಿದ್ದಾರೆ.
ಮಠದಕೆರೆ ಹಾಗೂ ಶೇಷನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಈ ಭಾಗಕ್ಕೆ ಹುಸಿಯಾಗಿದ್ದು 33 ಹಳ್ಳಿಯ ಜನರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಠರಿಸಿದ್ದಾರೆ. ಮಾತ್ರ ನಾಮಪತ್ರ ಸಲ್ಲಿಸಲು ಡಿ.11.ಕೊನೆಯ ದಿನವಾಗಿದೆ. ಈ ಎರಡು ದಿನಗಳಲ್ಲಿ ಅಭ್ಯರ್ಥಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ.ಎನ್.ಕೋಟೆಯಲ್ಲಿ ಬುಧವಾರ 8 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣೆ ಅಧಿಕಾರಿ ಪಿ.ಲಿಂಗರಾಜು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ