ಎಂ.ಎನ್.ಕೋಟೆ :
ಗುಬ್ಬಿ ತಾಲ್ಲೂಕಿನ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯ ಎರಡು ಗ್ರಾಮದ 33 ಹಳ್ಳಿಯ ಗ್ರಾಮಸ್ಥರು ಸಚಿವ ರಮೆಶ್ ಜಾರಕಿಹೊಳೆಯವರನ್ನು ಸೋವiವಾರ ಬೆಂಗಳೂರಿನ ಸದಾಶಿವನಗರದಲ್ಲಿ ಭೇಟಿ ಮಾಡಿ ಮಠ ಹಾಗೂ ಶೇಷನಹಳ್ಳಿ ಕೆರೆಗೆ ಹೇಮಾವತಿ ನೀರನ್ನು ಹರಿಸಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದರು.
ಮಠ ಹಾಗೂ ಶೇಷನಹಳ್ಳಿ ಕೆರೆಗೆ ಐದು ಆರು ತಿಂಗಳಿನಿಂದ ಈ ಭಾಗದ ಹೇಮಾವತಿ ನೀರಿನ ಕಾಮಾಗಾರಿ ಬಗ್ಗೆ ಚರ್ಚಿಸಿದ್ದೆ ಕೋವಿಡ್ ಬಂದು ಸ್ವಲ್ಪ ತಡೆಯಾಗಿದೆ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು ಚುನಾವಣೆ ಮುಗಿದ ಮೇಲೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕೊಡಲೆ ಟೆಂಡರ್ ಕೆರೆದು ದಿನಾಂಕ ನಿಗದಿಮಾಡಲಾಗುತ್ತದೆ ಎಂದರು.
ಗುಬ್ಬಿ ತಾಲ್ಲೂಕಿನ ಮಠ ಹಾಗೂ ಶೇಷನಹಳ್ಳಿ ಕೆರೆಗೆ ನಾನೇ ಬಂದು ಭೂಮಿಪೂಜೆ ಮಾಡುತ್ತೇನೆ. ಮಠ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯ ಸುತ್ತಮುತ್ತಲಿನ ಹಳ್ಳಿಯ ರೈತರಿಗೆ ಅನುಕೂಲವಾಗುತ್ತದೆ. ಈ ಭಾಗದ ಸುಮಾರು ವರ್ಷಗಳ ರೈತರ ಕನಸು ನನಸು ಆಗುತ್ತದೆ ಹೇಮಾವತಿ ನೀರು ಈ ಭಾಗದ ಕೆರೆಗಳಿಗೆ ಹರಿಯಲಿದೆ ಎಂದು ಮಠ ಹಾಗೂ ಅಂಕಸಂದ್ರ ಗ್ರಾಮದ ರೈತರಿಗೆ ಸಚಿವ ರಮೇಶ್ ಜಾರಿಕೆಹೊಳೆ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ಮೇಲೆ ಟೆಂಡರ್ ಕರೆದು ಅದಷ್ವು ಬೇಗ ಕಾಮಾಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಮಾಂಜಿನಯ್ಯ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಲಿಂಗಯ್ಯ, ಮುಖಂಡರಾದ ರಮೇಶ್, ದೊಡಯ್ಯ, ಸಣ್ಣರಂಗಯ್ಯ, ಮಂಜಣ್ಣ, ಲಕ್ಷ್ಮೀಕಾಂತ್, ಹಾಗೂ ಮಠ ಹಾಗೂ ಅಂಕಸಂದ್ರ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ