ಗ್ರಾಪಂ ಸಭೆಗೆ ಬಾರದ ಅಧಿಕಾರಿಗಳು : ಅಧ್ಯಕ್ಷೆ ಗರಂ

 ಎಂ.ಎನ್.ಕೋಟೆ : 

     ಜಿಪಂ ಮತ್ತು ತಾಪಂ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳು ಭಾಗವಹಿಸುತ್ತಾರೆ. ಆದರೆ ಸ್ಥಳೀಯ ಗ್ರಾಪಂ ಸಭೆಗಳಲ್ಲಿ ಯಾಕೆ ಭಾಗವಹಿಸುತ್ತಿಲ್ಲ ಎಂದು ಗ್ರಾಪಂ ಅಧ್ಯಕ್ಷೆ ಶಶಿಕಲಾ ಯೋಗಿಶ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

      ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಎಂ.ಎನ್.ಕೋಟೆ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳು ಇರುತ್ತವೆ ಹಾಗಾಗಿ ಗ್ರಾಪಂ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ನಡುವೆ ಚರ್ಚೆ ನಡೆಯಬೇಕು ಆದರೆ ಅವರೇ ಬರುವುದಿಲ್ಲ ಎಂದರೆ ಹೇಗೆ, ಇದರ ಬಗ್ಗೆ ಇಲಾಖೆಯವರಿಗೆ ನೋಟಿಸ್ ಕೊಡಿ ಎಂದು ಪಿಡಿಓಗಳಿಗೆ ತಿಳಿಸಿದರು.

      ಇನ್ನೂ ಕೃಷಿ ಇಲಾಖೆಯಿಂದ ಸುಮಾರು ನಿಟ್ಟೂರು ಹೋಬಳಿಗೆ 450 ಟಾರ್ಪಲ್‍ಗಳನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ನೀಡುತ್ತಿದ್ದೀರಿ, ಆದರೆ ಎಂ.ಎನ್.ಕೋಟೆ ಗ್ರಾಪಂಯ ಯಾವುದೇ ರೈತರಿಗೆ ಈ ಟಾರ್ಪಲ್ ಸಿಕ್ಕಿಲ್ಲ. ಯಾರಿಗೆ ಮಾರಿಕೊಂಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸದಸ್ಯ ಸಿದ್ದರಾಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಎಂ.ಎನ್.ಭೀಮಶೆಟ್ಟಿ ಮಾತನಾಡಿ ಆಸ್ಪತ್ರೆಯ ಸಿಬ್ಬಂದಿಗಳು ಕೊರೋನಾ ಲಸಿಕೆಯನ್ನು ಯಾವ ಪ್ರಮಾಣದಲ್ಲಿ ನೀಡುತ್ತಿದ್ದೀರಾ, ಪ್ರತಿದಿನ ಎಷ್ಟು ಡೋಸ್‍ಗಳು ಬರುತ್ತಿವೆ ಅದರ ಬಗ್ಗೆ ಮಾಹಿತಿಯನ್ನು ನೀಡಬೇಕು ಮತ್ತು ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ವೈದ್ಯರು ಜವಬ್ದಾರಿಯಿಂದ ಕೆಲಸ ಮಾಡಬೇಕು. ಜೊತೆಗೆ ಲಸಿಕೆ ಕುರಿತು ಜನರಿಗೆ ಮುಂಚಿತವಾಗಿ ಮಾಹಿತಿ ನೀಡಿ ಪ್ರತಿ ಹಳ್ಳಿಗಳಲ್ಲಿ ಕ್ಯಾಂಪ್‍ಮಾಡಿ ಸಾರ್ವಜನಿಕರಿಗೆ ಲಸಿಕೆಯನ್ನು ನೀಡಿದ್ದರೇ ದೂರದಿಂದ ಬರುವ ರೈತಾಪಿ ಜನಗಳಿಗೆ ಅನುಕೂಲವಾಗುತ್ತದೆ ಎಂದರು.

      ಮುಂದಿನ ಕೆಡಿಪಿ ಸಭೆಗಳಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಅಶಿಸ್ತು ನಡೆಯಬಾರದು, ಪ್ರತಿಯೊಬ್ಬ ಅಧಿಕಾರಿಯೂ ಕೂಡ ಭಾಗವಹಿಸಬೇಕು ಎಂದು ಅಧ್ಯಕ್ಷರಿಗೆ ಸದಸ್ಯರು ಒತ್ತಾಯಿಸಿದರು.

      ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸಿದ್ದಗಂಗಮ್ಮ ಕಲ್ಲೇಶ್, ಸದಸ್ಯರಾದ ನರಸಯ್ಯ, ರವೀಶ್, ದೀಲೀಪ್ ಕುಮಾರ್, ಶಿವಪ್ಪ, ಕಾಂತರಾಜು, ಡಾ.ವಿನಯ್, ಕೃಷಿ ಅಧಿಕಾರಿ ಪ್ರಕಾಶ್, ಕಂದಾಯಧಿಕಾರಿ ನಾರಾಯಣ್, ಅಪ್ಸರಾ, ಬೆಸ್ಕಾಂ ಅಧಿಕಾರಿ ಕಾಂತರಾಜು, ಪಿಡಿಓ ಸಿ.ನಾಗೇಂದ್ರ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap