ಜನರನ್ನು ವಂಚಿಸುತ್ತಿರುವ ಮೊಬೈಲ್ ಕಂಪನಿಗಳು

ಗುಬ್ಬಿ:

     ಗುಬ್ಬಿ ಪಟ್ಟಣದಲ್ಲಿ ಸುಮಾರು ಆರೇಳು ತಿಂಗಳುಗಳಿಂದ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ ಈ ಬಗ್ಗೆ ಮೊಬೈಲ್ ಕಂಪನಿಗಳು ತಲೆಕೆಡೆಸಿಕೊಂಡಿಲ್ಲ ತಿಂಗಳಿಗೆ 300 ರೂ ಗಳಿಗೂ ಹೆಚ್ಚು ಕಸಿಯುವ ಏರ್ ಟೆಲ್ ಕಂಪನಿ ತನ್ನ ತರಂಗಾಂತರಗಳಬಗ್ಗೆ ಗಮನ ಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

     ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದರೂ ಯಾರು ಸರಿಯಾದ ಮಾಹಿತಿ ಹೇಳುತ್ತಿಲ್ಲ ಎನ್ನುತ್ತಾರೆ ಮಹಾಲಕ್ಷ್ಮೀನಗರ ವಾಸಿ ಕೃಷ್ಣಮೂರ್ತಿ ಆದರೆ ಮಾತ್ರ ತಿಂಗಳಿಗೊಮ್ಮೆ ಸರಿಯಾಗಿ ಬಿಲ್ಲು ಮತ್ತು ಕರೆನ್ಸಿ ಹಾಕಿಸದಿದ್ದರೆ ಫೋನ್ ಸಂಪರ್ಕ ಕಡಿದುಹಾಕುತ್ತಾರೆ ಎಂದು ತಿಳಿಸಿದ್ದಾರೆ
ಸರ್ಕಾರದ ದೂರಸಂಪರ್ಕ ಇಲಾಖೆ ಈ ಬಗ್ಗೆ ಜಾಣ ಮೌನ ವಹಿಸಿದ್ದು ಇಲ್ಲಿನ ಅಧಿಕಾರಿಗಳು ಏರ್ ಟೆಲ್ ಹಾಗೂ ಜಿಯೋ ಕಂಪನಿ ಗಳ ಜೊತೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿವೆ ಎಂದು ಗ್ರಾಹಕರು ದೂರುತ್ತಿದ್ದಾರೆ,