ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿ; ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ

ಗಾಂಧಿನಗರ: 

    ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಾದ ರಾಷ್ಟ್ರೀಯ ಏಕತಾ ದಿವಸ್  ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ  ಅವರು ಶುಕ್ರವಾರ ಏಕತಾ ದಿನಾಚರಣೆಯ ನೇತೃತ್ವ ವಹಿಸಿ, ಏಕತಾ ಪ್ರತಿಮೆಗೆ ಪ್ರಧಾನಿ ಪುಷ್ಪ ನಮನ ಸಲ್ಲಿಸಿದ್ದಾರೆ. ಏಕತೆಯ ಪ್ರಮಾಣವಚನ ಬೋಧಿಸಿದ ಅವರು, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಸಂರಕ್ಷಣೆಗೆ ನಾನು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಎಂದು ನಾನು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದಿಂದ ಸಾಧ್ಯವಾದ ನನ್ನ ದೇಶದ ಏಕತೆಯ ಉತ್ಸಾಹದಲ್ಲಿ ನಾನು ಈ ಪ್ರಮಾಣವಚನ ಸ್ವೀಕರಿಸುತ್ತೇನೆ. ನನ್ನ ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನನ್ನ ಪಾತ್ರವನ್ನು ನಿರ್ವಹಿಸಲು ನಾನು ಸಂಕಲ್ಪ ಮಾಡುತ್ತೇನೆ” ಎಂದು ಮೋದಿ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿವಸ್’ ಪರೇಡ್ ನಡೆಸಲಾಯಿತು. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಸಿಮ್ರಾನ್ ಭಾರದ್ವಾಜ್ ಅವರು ಪ್ರಧಾನಿಗೆ ಗೌರವ ವಂದನೆ ಸಲ್ಲಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಸಂದರ್ಭದಲ್ಲಿ, ಭವ್ಯ ಮೆರವಣಿಗೆಯ ಮೂಲಕ ಏಕತೆ ಮತ್ತು ಧೈರ್ಯದ ಮನೋಭಾವಕ್ಕೆ ಗೌರವ ಸಲ್ಲಿಸಲಾಯಿತು.

    ಈ ಮೆರವಣಿಗೆಯಲ್ಲಿ ಬಿಎಸ್‌ಎಫ್, ಸಿಆರ್‌ಪಿಎಫ್, ಸಿಐಎಸ್‌ಎಫ್, ಐಟಿಬಿಪಿ ಮತ್ತು ಎಸ್‌ಎಸ್‌ಬಿಯ ಆಕರ್ಷಕ ತುಕಡಿಗಳು, ಅಸ್ಸಾಂ, ತ್ರಿಪುರ, ಒಡಿಶಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಕೇರಳ ಮತ್ತು ಆಂಧ್ರಪ್ರದೇಶದ ರಾಜ್ಯ ಪೊಲೀಸ್ ಪಡೆಗಳು ಮತ್ತು ಎನ್‌ಸಿಸಿಯ ಕೆಡೆಟ್‌ಗಳು ಭಾಗವಹಿಸಿದ್ದರು – ಇದು ದೇಶದ ಸಾಮೂಹಿಕ ಶಕ್ತಿ, ಏಕತೆ ಮತ್ತು ಆಂತರಿಕ ಭದ್ರತೆಗೆ ಸಮರ್ಪಣೆಯನ್ನು ಪ್ರದರ್ಶಿಸಿತು.

    ಏಕ್ತಾ ನಗರದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ  ಸಹ ವೈಮಾನಿಕ ಪ್ರದರ್ಶನ ನೀಡಿತು. ಸಿಆರ್‌ಪಿಎಫ್‌ನಿಂದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾದ ಐವರು ಮತ್ತು ಬಿಎಸ್‌ಎಫ್‌ನಿಂದ ಶೌರ್ಯ ಪದಕ ವಿಜೇತರಾದ ಹದಿನಾರು ಯೋಧರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

    2014 ರಿಂದ ಅಕ್ಟೋಬರ್ 31ನ್ನು ರಾಷ್ಟ್ರೀಯ ಏಕತಾ ದಿವಸ್ (ರಾಷ್ಟ್ರೀಯ ಏಕತಾ ದಿನ) ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ ಏಕ್ತಾ ನಗರ ಬಳಿ 182 ಮೀಟರ್ ಎತ್ತರದ ಪಟೇಲ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

Recent Articles

spot_img

Related Stories

Share via
Copy link