ಮೋದಿಯನ್ನು ಭೇಟಿಯಾಗಲು 400 ಕಿ.ಮೀ. ಪ್ರಯಾಣಿಸಿದ ಅಭಿಮಾನಿ

ಬ್ಯೂನಸ್ ಐರಿಸ್‌: 

   ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಅರ್ಜೆಂಟೀನಾ ತಲುಪಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ವ್ಯಕ್ತಿಯೊಬ್ಬರು ಸುಮಾರು 400 ಕಿ.ಮೀ. ಪ್ರಯಾಣ ಮಾಡಿ ಬಂದಿದ್ದಾರೆ. ಈ ವೇಳೆ ಪ್ರಧಾನಿ ಅವರಿಗೆ ಹಲೋ ಹೇಳಿ ಅವರ ಕೈಕುಲುಕಲು ಅವಕಾಶ ಸಿಕ್ಕಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀನಾದ ಬ್ಯೂನಸ್ ಐರಿಸ್‌  ಗೆ ಬಂದಿಳಿದಾಗ ಅವರನ್ನು ಇಲ್ಲಿನ ಭಾರತೀಯ ಸಮುದಾಯ ಸ್ವಾಗತಿಸಿತು. ಮೋದಿ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

   ಬ್ಯೂನಸ್ ಐರಿಸ್‌ಗೆ ಪ್ರಧಾನಿ ನರೇಂದ್ರ ಮೋದಿ ಬಂದು ಇಳಿದಾಗ ಅರ್ಜೆಂಟೀನಾದಲ್ಲಿರುವ ಭಾರತೀಯ ವಿಜಯ್ ಕುಮಾರ್ ಗುಪ್ತಾ ನಮಸ್ಕಾರದರು. ಅಲ್ಲದೆ ಮೋದಿ ಅವರ ಕೈಕುಲುಕಿದರು. ಇದು ಅತ್ಯಂತ ಸಂತಸದ ಕ್ಷಣ ಎಂದು ಅವರು ಹೇಳಿಕೊಂಡಿದ್ದಾರೆ.ವಿಜಯ್ ಕುಮಾರ್ ಪ್ರಧಾನಿ ಮೋದಿಯನ್ನು ಕಾಣಲೆಂದು ಸುಮಾರು 400 ಕಿ.ಮೀ. ಪ್ರಯಾಣ ಮಾಡಿ ಬಂದಿದ್ದರು. ಈ ವೇಳೆ ಪ್ರಧಾನಿ ಮೋದಿಯ ಕೈ ಕುಲುಕುವ ಅವಕಾಶವೂ ಸಿಕ್ಕಿತು ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

    ಈ ಕುರಿತು ಮಾಧ್ಯಮದ ಜತೆ ಮಾತನಾಡಿದ ಗುಪ್ತಾ, ನಾನು ಇಲ್ಲಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ರೊಸಾರಿಯೋದಿಂದ ಬಂದಿದ್ದೇನೆ. ಅದು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕಾರ ಹೇಳಲು. ಆದರೆ ಅವರೊಂದಿಗೆ ಕೈಕುಲುಕುವ ಅವಕಾಶ ನನಗೆ ಸಿಕ್ಕಿತು ಎಂದು ಹೇಳಿದ್ದಾರೆ.

    ಬ್ಯೂನಸ್ ಐರಿಸ್‌ಗೆ ಪ್ರಧಾನಿಯವರು ಬಂದಿಳಿದಾಗ ‘ಭಾರತ್ ಮಾತಾ ಕಿ ಜೈ’, ‘ಜೈ ಶ್ರೀ ರಾಮ್’ ಮತ್ತು ‘ಮೋದಿ-ಮೋದಿ’ ಎನ್ನುವ ಘೋಷಣೆಯೊಂದಿಗೆ ಅವರನ್ನು ಸ್ವಾಗತಿಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಾರತೀಯ ವಲಸಿಗರು ಇಲ್ಲಿ ಸೇರಿದ್ದರು.

    ಅರ್ಜೆಂಟೀನಾ ತಲುಪಿದ ಪ್ರಧಾನಿ ಮೋದಿ ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, ʼʼಅರ್ಜೆಂಟೀನಾ ಜತೆಗಿನ ಸಂಬಂಧಗಳನ್ನು ವೃದ್ಧಿಸುವತ್ತ ಗಮನಹರಿಸುವ ದ್ವಿಪಕ್ಷೀಯ ಭೇಟಿಗಾಗಿ ಬ್ಯೂನಸ್ ಐರಿಸ್‌ಗೆ ಬಂದಿಳಿದಿದ್ದೇನೆ. ಅಧ್ಯಕ್ಷ ಜೇವಿಯರ್ ಮಿಲಿ ಅವರನ್ನು ಭೇಟಿ ಮಾಡಲು ಮತ್ತು ಅವರೊಂದಿಗೆ ವಿವರವಾದ ಮಾತುಕತೆ ನಡೆಸಲು ಉತ್ಸುಕನಾಗಿದ್ದೇನೆʼʼ ಎಂದು ತಿಳಿಸಿದ್ದಾರೆ. 

   ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ʼʼಎರಡು ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹವನ್ನು ಸಂಭ್ರಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಔಪಚಾರಿಕ ಸ್ವಾಗತ ನೀಡಲಾಯಿತು. 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಇದು ಹೊಸ ಅಧ್ಯಾಯʼʼ ಎಂದು ಹೇಳಿದ್ದಾರೆ.

   ಪ್ರಧಾನಿ ಮೋದಿ ತಮ್ಮ ಐದು ರಾಷ್ಟ್ರಗಳ ಪ್ರವಾಸದಲ್ಲಿ ಈಗಾಗಲೇ ಘಾನಾ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದು, ಇದೀಗ ಅರ್ಜೆಂಟೀನಾದಲ್ಲಿದ್ದಾರೆ. ಇಲ್ಲಿಂದ ಅವರು ಬ್ರೆಜಿಲ್, ಬಳಿಕ ನಮೀಬಿಯಾಕ್ಕೆ ತೆರಳಿ ಭಾರತಕ್ಕೆ ವಾಪಾಸ್ ಅಗಲಿದ್ದಾರೆ.

Recent Articles

spot_img

Related Stories

Share via
Copy link