ಗೋವಾ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಲಿರುವ ಮೋದಿ

ನವದೆಹಲಿ :

    ಪ್ರಧಾನಿ ನರೇಂದ್ರ ಮೋದಿ  ಅವರು ಪ್ರತಿವರ್ಷದಂತೆ ಈ ಬಾರಿಯೂ ದೀಪಾವಳಿಯನ್ನು ಸೈನಿಕರೊಟ್ಟಿಗೆ ಆಚರಿಸಲಿದ್ದಾರೆ. ಈ ಬಾರಿ ಅವರು ಗೋವಾ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯ  ಸಿಬ್ಬಂದಿಯೊಂದಿಗೆ ಆಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಯಾಮ್‌ನಲ್ಲಿ ನಡೆದ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಯಶಸ್ಸನ್ನು ಆಚರಿಸುವುದು ಪ್ರಧಾನಿಯವರ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ 2014 ರಲ್ಲಿ ಪ್ರಧಾನಿ ಮೋದಿಯವರು ಲಡಾಖ್‌ನ ಸಿಯಾಚಿನ್ ಹಿಮನದಿಗೆ ತೆರಳಿ ಅಲ್ಲಿರುವ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.

    ಹಾಗೇ 2015 ರಲ್ಲಿ ಇಂಡೋ-ಪಾಕ್ ಯುದ್ಧದ ವೀರರನ್ನು ಗೌರವಿಸಲು ಪಂಜಾಬ್‌ನ ಅಮೃತಸರದಲ್ಲಿರುವ ಡೋಗ್ರೆ ಸ್ಮಾರಕಕ್ಕೆ ಪ್ರಯಾಣ ಬೆಳೆಸಿದ್ದರು. 2016 ರಲ್ಲಿ ಹಿಮಾಚಲ ಪ್ರದೇಶದ ಸುಮ್ಮೊಗೆ ಭೇಟಿ ನೀಡಿದ ಮೋದಿಯವರು ಅಲ್ಲಿನ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯ ಜೊತೆ ದೀಪಾವಳಿ ಆಚರಿಸಿದರು. ಅದರ ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದ ಗುರೆಜ್ ಸೆಕ್ಟರ್‌ನಲ್ಲಿ ಅಲ್ಲಿನ ಪಡೆಗಳನ್ನು ಭೇಟಿ ಮಾಡಿದರು. ಮರು ವರ್ಷ ಪ್ರಧಾನ ಮಂತ್ರಿಯವರು ದೀಪಾವಳಿಗೆ ಹಿಮಾಚಲ ಪ್ರದೇಶದ ಸುಮ್ಡೋಗೆ ಭೇಟಿ ನೀಡಿದ್ದರು, ಅಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತು ಸೇನಾ ಸಿಬ್ಬಂದಿಯನ್ನು ಭೇಟಿ ಮಾಡಿದ್ದರು.

   2018 ರಲ್ಲಿ, ಉತ್ತರಾಖಂಡದ ಹರ್ಸಿಲ್‌ನಲ್ಲಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದರು. ಅದರ ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದ ರಾಜೇರಿಯಲ್ಲಿ ಸೈನಿಕರನ್ನು ಭೇಟಿ ಮಾಡಿದರು. ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ದೀಪಾವಳಿಯನ್ನು ಆಚರಿಸಲು ಐತಿಹಾಸಿಕ ಯುದ್ಧದ ಸ್ಥಳವಾದ ರಾಜಸ್ಥಾನದ ಜೈಸಲ್ಮೀರ್‌ನ ಲೋಂಗೆವಾಕ್ಕೆ ತೆರಳಿದ್ದರು. 

   2021 ರಲ್ಲಿ ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಸೈನಿಕರೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದರು. ಮುಂದಿನ ವರ್ಷ ಕಾರ್ಗಿಲ್ ಯುದ್ಧದ ಹುತಾತ್ಮರನ್ನು ಗೌರವಿಸಲು ಕಾರ್ಗಿಲ್‌ ಗೆ ಹೋದರು. ಪ್ರಸ್ತುತ 2 ವರ್ಷಗಳಿಂದ ದೀಪಾವಳಿಯನ್ನು ಹಿಮಾಚಲ ಪ್ರದೇಶದ ಲೆಪ್ಪಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ಬೀಡುಬಿಟ್ಟಿರುವ ಸೈನಿಕರೊಂದಿಗೆ ಆಚರಿಸಿದ್ದಾರೆ. ಅದರ ನಂತರದ ವರ್ಷ, ಅವರು ಕಾರ್ಗಿಲ್ ಯುದ್ಧದ ಹುತಾತ್ಮರನ್ನು ಗೌರವಿಸಲು ಕಾರ್ಗಿಲ್‌ಗೆ ಹೋಗಿದ್ದರು. ಅವರು ಕಳೆದ ಎರಡು ದೀಪಾವಳಿಗಳನ್ನು ಹಿಮಾಚಲ ಪ್ರದೇಶದ ಲೆಪ್ಚಾ ಮತ್ತು ಗುಜರಾತ್‌ನ ಸರ್ ಕ್ರೀಕ್‌ನಲ್ಲಿ ಬೀಡುಬಿಟ್ಟಿರುವ ಸೈನಿಕರೊಂದಿಗೆ ಆಚರಿಸಿದ್ದರು.

Recent Articles

spot_img

Related Stories

Share via
Copy link