ತುಮಕೂರು:
ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದು, 2 ಜಿಲ್ಲೆಯಲ್ಲಿ 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಸರ್ಕಾರ ಕಾರ್ಯ ಪಕ್ಷದ ಕಾರ್ಯವೆರಡನ್ನು ಮಾಡಲು ಬರುತ್ತಿದ್ದು ಅವರ ಆಗಮನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ .
ಇನ್ನು ಪ್ರಧಾನಿ ಮೋದಿ ಆಗಮನದಿಂದ ಬೆಂಗಳೂರನ್ನು ಸಿಂಗಾರ ಮಾಡಲಾಗಿದ್ದು ರಸ್ತೆ ಗುಂಡಿಗಳನ್ನು ಮುಚ್ಚುವುದು, ತುಕ್ಕು ಹಡಿದ ರಸ್ತೆ ಬದಿಯ ಗ್ರಿಲ್ ಗಳಿಗೆ ಹೊಸ ಬಣ್ಣ ಇನ್ನು ಮುಂತಾದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇನ್ನು ರಾಜಧಾನಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ಮಧ್ಯಾಹ್ನ ಕಲ್ಪತರು ನಾಡು ತುಮಕೂರು ಜಿಲ್ಲೆಗೆ ಭೇಟಿ ನೀಡಿ ಮಧ್ಯಾಹ್ನ 3.30ಕ್ಕೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆಹಳ್ಳ ಕಾವಲ್ನಲ್ಲಿರೋ ನೂತನ ಹೆಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಜಲಜೀವನ್ ಮಿಷನ್ ಯೋಜನೆಯಡಿ ತಿಪಟೂರಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಫೆಬ್ರವರಿ 6 ರಂದು ನಾನು ಕರ್ನಾಟಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಲುಪಿದ ನಂತರ, ನಾನು ಭಾರತ ಇಂಧನ ಸಪ್ತಾಹ 2023ರಲ್ಲಿ ಭಾಗವಹಿಸುತ್ತೇನೆ. ನಂತರ, ನಾನು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ನಾಳೆ, ಫೆಬ್ರವರಿ 6 ರಂದು ನಾನು ಕರ್ನಾಟಕದಲ್ಲಿ ಇರಲು ಎದುರು ನೋಡುತ್ತಿದ್ದೇನೆ. ಬೆಂಗಳೂರು ತಲುಪಿದ ನಂತರ, ನಾನು ಭಾರತ ಇಂಧನ ಸಪ್ತಾಹ 2023ರಲ್ಲಿ ಭಾಗವಹಿಸುತ್ತೇನೆ. ನಂತರ, ನಾನು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮಾಡಲು ತುಮಕೂರಿಗೆ ಭೇಟಿ ನೀಡುತ್ತೇನೆ https://t.co/5f8t4MAnUH
— Narendra Modi (@narendramodi) February 5, 2023