ಏ.14ರಂದು ಕರ್ನಾಟಕಕ್ಕೆ ಮೋದಿ ಆಗಮನ …..!

ಬೆಂಗಳೂರು:

     ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ಹೊತ್ತಿನಲ್ಲಿ ರಾಜ್ಯದಲ್ಲಿ ಪಕ್ಷಗಳಿಂದ ಪ್ರಚಾರ ಜೋರಾಗಿದೆ. ಇದೇ ಭಾನುವಾರ ಏಪ್ರಿಲ್ 14ರಂದು ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬಂದು ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ.

     ಕರ್ನಾಟಕ ಬಿಜೆಪಿ ತನ್ನ ರಾಜಕೀಯ ಪ್ರಚಾರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಾದ ಸಾಮಾನ್ಯ ಜನರಿಗೆ ‘ನಾನು ಮೋದಿ ಪರಿವಾರ, ಮೋದಿಗಾಗಿ ಒಂದು ಭಾನುವಾರ’ (ಮೋದಿಗಾಗಿ ಭಾನುವಾರ) ಅಭಿಯಾನದಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಚಾರ ಕಾರ್ಯ ತೀವ್ರಗೊಳಿಸಿದೆ.

      ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ ಸುನೀಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ನಿವೃತ್ತ ಅಧಿಕಾರಿಗಳು, ವಿದ್ಯಾರ್ಥಿಗಳು, ಐಟಿ ವೃತ್ತಿಪರರು,ವ್ಯಾಪಾರಿಗಳು ಮತ್ತು ಇತರರು ತಮ್ಮ ಬೆಳಗಿನ ನಡಿಗೆಯಲ್ಲಿ ಅಥವಾ ಅವರ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ಅಥವಾ ಅವರವರ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಾರೆ. “ಇದು ಸಾಮಾನ್ಯ ಜನರನ್ನು ಒಳಗೊಳ್ಳುವ ಮತ್ತು ಸಾಮಾನ್ಯ ಜನರನ್ನು ತಲುಪುವ ಪರಿಕಲ್ಪನೆಯಾಗಿದೆ” ಎಂದು ಅವರು ಹೇಳಿದರು.

      ಪಕ್ಷವು ಏಪ್ರಿಲ್ 21 ಮತ್ತು 28 ರಂದು ಈ ಅಭಿಯಾನವನ್ನು ನಡೆಸಲಿದೆ. “ಮೋದಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಗಳು ಅಥವಾ ಇತರ ಕಾರ್ಯಕ್ರಮಗಳಿಗೆ ಇತರ ದಿನಗಳಲ್ಲಿ ಬರುವುದಿಲ್ಲ, ಆದರೆ ಭಾನುವಾರದಂದು ಭಾಗವಹಿಸಲು ಉತ್ಸುಕವಾಗಿದ್ದಾರೆ. ಮನೆ ಮನೆಗಳಿಗೆ ಭೇಟಿ ನೀಡುತ್ತಾರೆ, ಹೋಟೆಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಜನರನ್ನು ಭೇಟಿ ಮಾಡುತ್ತಾರೆ. ಅವರ ಬೆಳಗಿನ ನಡಿಗೆಯಲ್ಲಿ ಜನರೊಂದಿಗೆ, ನೆರೆಹೊರೆಯವರೊಂದಿಗೆ ಮಾತನಾಡುತ್ತಾ ಅವರನ್ನು ತಲುಪಲು ಪ್ರಯತ್ನಿಸುತ್ತಾರೆ ಎಂದರು.

           ಪ್ರತಿ ಬೂತ್ ಮಟ್ಟದಲ್ಲಿ ಎರಡರಂತೆ ಸಣ್ಣ ಸಭೆಗಳನ್ನು ನಡೆಸುವಂತೆ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಲಾಗಿದೆ. 58,000 ಬೂತ್‌ಗಳಿವೆ. ಪ್ರತಿ ಸಭೆಯು 25 ರಿಂದ 50 ಜನರ ಸಣ್ಣ ಗುಂಪನ್ನು ಒಳಗೊಂಡಿರುತ್ತದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 500 ಸಭೆಗಳನ್ನು ನಡೆಸುವ ಮೂಲಕ ಹೆಚ್ಚು ಜನರನ್ನು ತಲುಪುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು.

     ರಾಜ್ಯ ಸರ್ಕಾರ ಮಹಿಳೆಯರಿಗೆ 2,000 ರೂಪಾಯಿಗಳನ್ನು ನೀಡಿದೆ ಆದರೆ ಹಾಲಿನ ದರವನ್ನು ಹೆಚ್ಚಿಸುವ ಮೂಲಕ ಮತ್ತು ಅನೇಕ ಸಬ್ಸಿಡಿಗಳನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿ ಕುಟುಂಬಕ್ಕೆ 4,500 ರೂಪಾಯಿ ಹೆಚ್ಚಿನ ಹೊರೆಯನ್ನು ಹೇಗೆ ಹಾಕಿದೆ ಎಂಬುದನ್ನು ವಿವರಿಸಲು ಪಕ್ಷದ ಕಾರ್ಯಕರ್ತರು ಮತದಾರರ ಮನೆಗೆ ಭೇಟಿ ನೀಡಲಿದ್ದಾರೆ. ಇದನ್ನು ಏಪ್ರಿಲ್ 17 ರೊಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ.

     ಮೈಸೂರಿನಲ್ಲಿ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ವೇದಿಕೆ ಹಂಚಿಕೊಳ್ಳುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲುವಿಗೆ ಪೈಪೋಟಿ ನಡೆಸುತ್ತಿದೆ.

      ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ವಿ ಸುನೀಲ್ ಕುಮಾರ್, ಸಂಜೆ 4 ಗಂಟೆಗೆ ಸಾರ್ವಜನಿಕರೊಂದಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.

     ಮೈಸೂರಿನಲ್ಲಿ ದೇವೇಗೌಡರ ಉಪಸ್ಥಿತಿಯಿಂದ ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷಕ್ಕೆ ಬಲ ಬರಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇಲ್ಲಿ ಜೆಡಿಎಸ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ.

       ರ್ಯಾಲಿ ಮತ್ತು ರೋಡ್‌ಶೋನಲ್ಲಿ ಭಾಗವಹಿಸುವ ಜನರಿಗೆ ಪಕ್ಷದ ಚಿಹ್ನೆಯಾದ ಕಮಲದ ಆಕಾರದಲ್ಲಿ ಮೆಹೆಂದಿಯನ್ನು ತಮ್ಮ ಅಂಗೈಗೆ ಹಾಕಿಕೊಳ್ಳುವಂತೆ ಬಿಜೆಪಿ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

     ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆ ವರೆಗೆ ಸುಮಾರು 2 ಕಿ.ಮೀ ವರೆಗೆ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು. ಇದು ಬಲ್ಲಾಳ್‌ಬಾಗ್, ಪಿವಿಎಸ್ ಜಂಕ್ಷನ್ ಮತ್ತು ನವಭಾರತ ವೃತ್ತದ ಮೂಲಕ ಹಾದುಹೋಗುತ್ತದೆ. ರೋಡ್ ಶೋ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಪಕ್ಷವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಿದೆ ಎಂದು ಹೇಳಿದರು. ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಮಂಗಳೂರು, ಮೂಡುಬಿದಿರೆಯಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap