ನವದೆಹಲಿ
ಬಿಜೆಪಿಯು ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿರುವ ಕಾರಣ ಇವರೆಲ್ಲಾ ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
1984ರ ಗಲಭೆಯ ನಂತರ ನಡೆದ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿಯ ಬಗ್ಗೆ ಚಿಂತಿತರಾಗಿರುವ ಪ್ರತಿಪಕ್ಷಗಳು ಇಂತಹ ಕೃತ್ಯಕ್ಕೆ ಕೈ ಹಾಕುತ್ತಿವೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ನೂತನವಾಗಿ ನಿರ್ಮಿಸಲಾದ ಬಿಜೆಪಿ ಕೇಂದ್ರ ಕಚೇರಿ (ವಿಸ್ತರಣೆ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಭಾರತದ ಉದ್ದಗಲಕ್ಕೂ, ಬಿಜೆಪಿ ಏಕೈಕ ಪ್ಯಾನ್-ಇಂಡಿಯಾ ರಾಜಕೀಯ ಪಕ್ಷವಾಗಿದೆ. ಕುಟುಂಬ ನಿರ್ವಹಣೆಯಲ್ಲಿ ನಡೆಯುವ ರಾಜಕೀಯ ಪಕ್ಷಗಳಿಗಿಂತ ಭಿನ್ನವಾಗಿ ಬಿಜೆಪಿ ಯುವಕರಿಗೆ ಅವಕಾಶಗಳನ್ನು ನೀಡುವ ರಾಜಕೀಯ ಪಕ್ಷವಾಗಿದೆ. ನಮಗೆ ಭಾರತದ ಮಹಿಳೆಯರ ಆಶೀರ್ವಾದವಿದೆ” ಎಂದಿದ್ದಾರೆ.
ಭಾರತೀಯ ಜನತಾ ಪಕ್ಷವನ್ನು “ಭಾರತದ ಅತ್ಯಂತ ಭವಿಷ್ಯದ ಪಕ್ಷ” ಎಂದು ಕರೆದಿರುವ ಪ್ರಧಾನಿ ಮೋದಿ, 2 ಸ್ಥಾನಗಳಿಂದ 303 ಲೋಕಸಭಾ ಸ್ಥಾನಗಳಿಗೆ ಏರಿರುವ ದಣಿವಿಲ್ಲದ ಮತ್ತು ನಿರಂತರ ಪ್ರಯಾಣವನ್ನು ಮತ್ತೆ ನೆನಪಿಸಿಕೊಂಡರು. ಜೊತೆಗೆ 1984 ರ ಸಿಖ್ ವಿರೋಧಿ ದಂಗೆ ಮತ್ತು ತುರ್ತು ಪರಿಸ್ಥಿತಿಯ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಪಿಎಂ ಮೋದಿ ಕಾಂಗ್ರೆಸ್ ವಿರುದ್ಧ ಕಟುವಾದ ದಾಳಿಯನ್ನು ಪ್ರಾರಂಭಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ