ಟ್ರಂಪ್‌ಗೆ ಕಠಿಣ ಸಂದೇಶ ರವಾನಿಸಿದ ಮೋದಿ

ನವದೆಹಲಿ: 

   ಭಾರತ ಹಾಗೂ ಅಮೆರಿಕದ ನಡುವೆ ತೆರಿಗೆ ಯುದ್ಧ ನಡೆಯುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ  ಅವರು ಈ ಕುರಿತು ಮಾತನಾಡಿದ್ದಾರೆ. ‘ರೈತರ ಹಿತಾಸಕ್ತಿ ಕಾಪಾಡಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ’’ಎಂದು ಮೋದಿ ಹೇಳಿದ್ದಾರೆ. ಭಾರೀ ಬೆಲೆ ತೆರಬೇಕಾದರೂ ಸಹ, ಭಾರತ ತನ್ನ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುತ್ತದೆ. ‘‘ರೈತರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಪ್ರಮುಖ ಆದ್ಯತೆ, ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಟ್ರಂಪ್‌ ಮೇಲೆ ವಾಗ್ದಾಳಿ ನಡೆಸಿದರು.

   ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ರೈತರ ಬೆಂಬಲಕ್ಕೆ ನಿಲ್ಲುವುದನ್ನು ಮುಂದುವರಿಸುವುದಾಗಿ ಮತ್ತು ಅಮೆರಿಕದ ಅತ್ಯಂತ ಹೆಚ್ಚಿನ ಸುಂಕಗಳ ಹೊರೆಯನ್ನು ಹೊರುವುದಾಗಿ ಸ್ಪಷ್ಟಪಡಿಸಿದರು. “ನಮಗೆ, ನಮ್ಮ ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ. “ಇದಕ್ಕೆ ನಾನು ವೈಯಕ್ತಿಕವಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ, ಮತ್ತು ನಾನು ಅದಕ್ಕೆ ಸಿದ್ಧನಿದ್ದೇನೆ. ಭಾರತ ಅದಕ್ಕೆ ಸಿದ್ಧವಾಗಿದೆ” ಎಂದು ಅವರು ಹೇಳಿದರು.

   ನಾವು ರೈತರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ರೈತರಿಗಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಳೆದ ವರ್ಷಗಳಲ್ಲಿ ಮಾಡಿದ ನೀತಿಗಳು ಸಹಾಯವನ್ನು ಮಾತ್ರವಲ್ಲದೆ ರೈತರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಸಮ್ಮಾನ್ ನಿಧಿಯಿಂದ ಪಡೆದ ನೆರವು ಸಣ್ಣ ರೈತರಿಗೆ ಆತ್ಮ ವಿಶ್ವಾಸವನ್ನು ನೀಡಿದೆ. ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯು ರೈತರಿಗೆ ಅನುಕೂಲಕರವಾಗಿದೆ ಎಂದು ಅವರು ಹೇಳಿದ್ದಾರೆ.

   ಭಾರತೀಯ ಸರಕುಗಳ ಮೇಲೆ ಟ್ರಂಪ್ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸಿದ ನಂತರ ಪ್ರಧಾನಿಯಿಂದ ಈ ಹೇಳಿಕೆಗಳು ಬಂದಿವೆ. ರಷ್ಯಾದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಅನಿರ್ದಿಷ್ಟ ದಂಡವನ್ನು ವಿಧಿಸುವುದಾಗಿ ಟ್ರಂಪ್‌ ಹೇಳಿದ್ದಾರೆ. ಟ್ರಂಪ್ ಅವರ ಸುಂಕದ ಆಕ್ರಮಣವು ಇತ್ತೀಚಿನ ವರ್ಷಗಳಲ್ಲಿ ಅಮೆರಿಕ-ಭಾರತ ಸಂಬಂಧಗಳನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದೆ. ಇದು ಎರಡೂ ಕಡೆಯ ರಫ್ತುದಾರರು ಮತ್ತು ಉದ್ಯಮ ನಾಯಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ.

Recent Articles

spot_img

Related Stories

Share via
Copy link