ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಮೋದಿ…!

ಶಿವಮೊಗ್ಗ:

     ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಿದ್ದು, ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ.

    ನವದೆಹಲಿಯಿಂದ ಸೇನಾ ವಿಮಾನದಲ್ಲಿ ಬಂದ ಮೋದಿಯವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದರು. ಈ ವೇಳೆ ಪ್ರಧಾನಿ ಮೋದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್​, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಸೇರಿ ಹಲವರು ಸ್ವಾಗತ ಕೋರಿದರು.

     ಬಳಿಕ ವಿಮಾನ ನಿಲ್ದಾಣವನ್ನು ಮೋದಿಯವರು ಉದ್ಘಾಟನೆ ಮಾಡಿ, ಸಮಾರಂಭ ವೇದಿಕೆಯಲ್ಲಿ ಮೋದಿಯವರಿಗೆ ಶಾಲು ಹೊದಿಸಿ ಈಶ್ವರಪ್ಪ ಅವರು ಸನ್ಮಾನಿಸಿದರು. ಬಳಿಕ ಮೋದಿಯವರಿಗೆ ವಿಶೇಷ ಪೇಟ ತೊಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಶಿವಮೊಗ್ಗ ಏರ್​ಪೋರ್ಟ್​ ಕಲಾಕೃತಿಯನ್ನು ಕಾಣಿಕೆ ನೀಡಿದರು.

    ಬಳಿಕ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಸನ್ಮಾನ ಮಾಡಿದರು. ಹಸಿರು ಶಾಲು ಹೊದಿಸಿ, ಅಡಕೆ ಹಾರ ಹಾಕಿ, ಪೇಟ ತೊಡಿಸಿ, ನೇಗಿಲು ನೀಡಿ ಸನ್ಮಾನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap