ಖರ್ಗೆ ಬಗ್ಗೆ ಮಾತನಾಡುವ ನೈತಿಕತೆ ಮೋದಿಗಿಲ್ಲ : ಸಿದ್ದರಾಮಯ್ಯ

ಬೆಂಗಳೂರು:

      ಬಿಜೆಪಿ ಹಿರಿಯ ನಾಯಕನನ್ನು ಅವಮಾನಿಸಿ, ಅಗೌರವಿಸಿದೆ. ಈ ಬೆಳವಣಿಗೆ ಯಡಿಯೂರಪ್ಪ  ಅವರು ಕಣ್ಣೀರು ಹಾಕುವಂತೆ ಮಾಡಿದ್ದು, ಇದರಿಂದ ಯಡಿಯೂರಪ್ಪ ಅವರ ಹೃದಯದಲ್ಲಿ ಬಿಜೆಪಿ ವಿರುದ್ಧ ರೋಷಾಗ್ನಿ ಕುದಿಯುವಂತೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.

     ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಾದ ಯಡಿಯೂರಪ್ಪ ಅವರಿಗೆ ಅಗೌರವ ತೋರಲಾಗಿದ್ದು, ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಅಗೌರವ ತೋರಿದೆ ಎಂದು ಮಾತನಾಡುವ ನೈತಿಕ ಹಕ್ಕು ಪ್ರಧಾನಿ ಮೋದಿಯವರಿಗಿಲ್ಲ ಎಂದು ಹೇಳಿದ್ದಾರೆ.

     ”7ನೇ ವೇತನ ಆಯೋಗ ರಚನೆಯಾಗಿ ಮೂರು ತಿಂಗಳು ಕಳೆದರೂ ಸರಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ನೌಕರರು ಮುಷ್ಕರ ನಡೆಸಿದರೆ ಸರ್ಕಾರಿ ವ್ಯವಸ್ಥೆ ಕೆಲಸ ಮಾಡುವುದಿಲ್ಲ. ಚುನಾವಣಾ ನೀತಿ ಸಂಹಿತೆ ಘೋಷಣೆಗೆ ಕೇವಲ 20 ದಿನಗಳು ಬಾಕಿ ಇರುವ ಕಾರಣ 7ನೇ ವೇತನ ಆಯೋಗವನ್ನು ಜಾರಿಗೆ ತರಲು ಸಿಎಂ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ