ನಮ್ಮ ಯೋಜನೆಯ ಲಾಭ ಮೋದಿ ಪಡೆದಿದ್ದಾರೆ :‌ ಜೈರಾಮ್‌ ರಮೇಶ್‌

ಬೆಂಗಳೂರು

     ಭಾನುವಾರ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ 50 ವರ್ಷದ ಹಿಂದೆ ಕಾಂಗ್ರೆಸ್ ಮಾಡಿದ್ದ ಯೋಜನೆಯ ಸಂಪೂರ್ಣ ಲಾಭವನ್ನು ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ.

     ಪ್ರಧಾನಮಂತ್ರಿ ನರೇಂದ್ರ ಮೋದಿಯವರು 50 ವರ್ಷಗಳ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮ ಪ್ರಯುಕ್ತ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸಫಾರಿ ಪ್ರಾಣಿ, ಪಕ್ಷಗಳು, ರಾಷ್ಟ್ರೀಯ ಉದ್ಯಾನವನವನ್ನು ಕಂಣ್ತುಂಬಿಕೊಂಡಿದ್ದಾರೆ. ಪ್ರಧಾನಿಯವರ ಈ ಕರ್ನಾಟಕ ಭೇಟಿ ಕುರಿತು ಕಾಂಗ್ರೆಸ್ ಪಕ್ಷ ಮತ್ತದರ ನಾಯಕರುಗಳು ವ್ಯಂಗ್ಯವಾಡಿದ್ದಾರೆ.

     ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಭಾನುವಾರ ಟ್ವೀಟ್ ಮಾಡಿದ್ದು, ಅದರಲ್ಲಿ ’50 ವರ್ಷಗಳ ಹಿಂದೆಯೇ (1973 ರಲ್ಲಿ) ಬಂಡೀಪುರದಲ್ಲಿ ಕಾಂಗ್ರೆಸ್ ಪಕ್ಷ ಪ್ರಾಜೆಕ್ಟ್ ಟೈಗರ್‌ನ ಯೋಜನೆಯನ್ನು ಆರಂಭಿಸಿತ್ತು. ಅದರಿಂದ ಹುಲಿ ಸಂತತಿಯ ರಕ್ಷಣೆಗೆ,ಹೆಚ್ಚಳ ಸಾಧ್ಯವಾಯಿತು. ಇದೀಗ ಇಲ್ಲಿಗೆ ಭೇಟಿ ನೀಡಿರುವ ಮೂಲಕ ಯೋಜನೆಯ ಎಲ್ಲ ಕ್ರೆಡಿಟ್ ಅನ್ನು ಪ್ರಧಾನಿ ಮೋದಿಯವರು ತೆಗೆದುಕೊಳ್ಳಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

     ದೇಶದಲ್ಲಿನ ಪರಿಸರ, ಅರಣ್ಯ, ವನ್ಯಜೀವಿಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರನ್ನು ರಕ್ಷಿಸಲು ಮಾಡಿದ ಎಲ್ಲಾ ಕಾನೂನುಗಳು ನಾಶವಾಗುತ್ತಿರುವೆ. ಹೀಗಿರುವಾಗ ಉದ್ಯಾನವನಕ್ಕೆ ಭೇಟಿ ನೀಡಿ ಪ್ರಧಾನಮಂತ್ರಿಗಳು ದೊಡ್ಡ ಚಮತ್ಕಾರವನ್ನೇ ಮಾಡಬಹುದು. ಆದರೆ ಅಲ್ಲಿನ ವಾಸ್ತವವೇ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಅರಣ್ಯ ಮತ್ತು ಅಲ್ಲಿನ ಜನರ ಸಮಸ್ಯೆಗಳ ಕುರಿತು ಹೇಳಿದರು. ಪ್ರಧಾನಿಮಂದಿತ್ರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದು, ಖಾಕಿ ಪ್ಯಾಂಟ್, ಟೀ ಶರ್ಟ್ ಮತ್ತು ಸಾಹಸ ಗಿಲೆಟ್ ಸ್ಲೀವ್‌ಲೆಸ್ ಜಾಕೆಟ್ ಧರಿಸಿ ಸಫಾರಿ ಮಾಡಿದರು. ಈ ಮೂಲಕ ಭಾರತದ ಅಗ್ರ ಹುಲಿ ಅಭಯಾರಣ್ಯಗಳಲ್ಲಿ ಸ್ಥಾನ ಪಡೆದಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಮಂತ್ರಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap