ಫಲಿತಾಂಶವಿಲ್ಲದಂತಾದ ಟ್ರಂಪ್-ಪುಟಿನ್ ಮಾತುಕತೆ….!

ವಾಷಿಂಗ್ಟನ್‌:

     ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಅಲಾಸ್ಕಾದಲ್ಲಿ ಭೇಟಿಯಾದರು. ಉಭಯ ನಾಯಕರು ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಮಾತುಕತೆ ನಡೆದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ತಾವು ಮತ್ತು ವ್ಲಾಡಿಮಿರ್ ಪುಟಿನ್ ಅವರು “ಒಪ್ಪಂದ”ಕ್ಕೆ ಬಂದಿದ್ದೇವೆ ಎಂದು ಪುಟಿನ್ ಹೇಳಿದ್ದರೂ, ಸಭೆಯ ನಂತರ ಯಾವುದೇ ಒಪ್ಪಂದಕ್ಕೆ ಬರಲಿಲ್ಲ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಇದು ಗೊಂದಲವನ್ನಂಟು ಮಾಡಿದೆ.

   ಒಪ್ಪಂದವಾಗುವವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಚರ್ಚೆಗಳ ಕುರಿತು ಮಾಹಿತಿ ನೀಡಲು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಶೀಘ್ರದಲ್ಲೇ ಮಾತನಾಡಲು ಯೋಜಿಸಿದ್ದೇನೆ. ನಾವು ಅತ್ಯಂತ ಉತ್ಪಾದಕ ಸಭೆಯನ್ನು ನಡೆಸಿದ್ದೇವೆ ಮತ್ತು ಹಲವು ಅಂಶಗಳನ್ನು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪುಟಿನ್‌ ಉಕ್ರೇನ್ ಕುರಿತು ತಾನು ಮತ್ತು ಟ್ರಂಪ್ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

  ರಷ್ಯಾ ಮತ್ತು ಅಮೆರಿಕ ಮತ್ತೆ ಸ್ನೇಹಿತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಉಕ್ರೇನ್ ಮತ್ತು ಯುರೋಪ್ ರಾಷ್ಟ್ರಗಳು ಇದನ್ನ ಸಕಾರಾತ್ಮಕವಾಗಿ ಸ್ವಕರಿಸಿ, ಅಡೆತಡೆ ಸೃಷ್ಟಿಸುವುದಿಲ್ಲ ಎಂದುಕೊಂಡಿದ್ದೇವೆ. ತೆರೆಮರೆಯಲ್ಲಿ ಯಾವುದೇ ಪ್ರಚೋದನೆ ಅಥವಾ ಪಿತೂರಿಯಿಂದ ಪ್ರಗತಿಗೆ ಅಡ್ಡಿಯಾಗಬಾರದು ಅಂತಾ ಪುಟಿನ್ ಎಚ್ಚರಿಸಿದ್ದಾರೆ. ಉಕ್ರೇನ್ ವಿಷಯವು ರಷ್ಯಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಅನ್ನೋ ಮೂಲಕ ಉಕ್ರೇನ್ ಮತ್ತು ಅದರ ಮಿತ್ರ ರಾಷ್ಟ್ರಗಳಾದ ಯುರೋಪ್ ದೇಶಗಳಿಗೆ ಸಂದೇಶ ರವಾನಿಸಿದ್ದಾರೆ. 

  ಅಮೆರಿಕದಲ್ಲಿ ಪುಟಿನ್‌ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಎಲ್ಮೆಂಡಾರ್ಫ್-ರಿಚರ್ಡ್ಸನ್ ಜಂಟಿ ನೆಲೆಯಲ್ಲಿ ಕೆಂಪು ಕಾರ್ಪೆಟ್ ಹಾಸಲಾಗಿತ್ತು. ಸಭೆಯು ಅಮೆರಿಕದ ಅಲಾಸ್ಕಾದ ಆಂಕಾರೇಜ್‌ನಲ್ಲಿ ನಡೆಯಿತು. ಈ ವೇಳೆ ಎರಡೂ ದೇಶಗಳ ನಿಯೋಗಗಳು ಉಪಸ್ಥಿತರಿದ್ದವು. ಇಬ್ಬರು ನಾಯಕರು ಉನ್ನತ ಸಲಹೆಗಾರರೊಂದಿಗೆ ತ್ರಿ-ಆನ್-ತ್ರಿ ಮಾದರಿಯಲ್ಲಿ ಭೇಟಿಯಾದರು. ಅಧ್ಯಕ್ಷ ಪುಟಿನ್ ಅವರನ್ನು ಬಿ-2 ಬಾಂಬರ್ ವಿಮಾನದೊಂದಿಗೆ ಸ್ವಾಗತಿಸಲಾಯಿತು. ಪುಟಿನ್ ರೆಡ್ ಕಾರ್ಪೆಟ್ ಮೇಲೆ ಬಂದ ತಕ್ಷಣ ಟ್ರಂಪ್ ಚಪ್ಪಾಳೆ ತಟ್ಟಿದರು. ಇದಕ್ಕೂ ಮೊದಲು ಟ್ರಂಪ್ ಸುಮಾರು ಅರ್ಧ ಗಂಟೆ ವಿಮಾನದಲ್ಲಿ ಕುಳಿತು ಪುಟಿನ್​​ಗಾಗಿ ಕಾಯುತ್ತಿದ್ದರು.

Recent Articles

spot_img

Related Stories

Share via
Copy link