ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ

ನವದೆಹಲಿ :

    ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ಮಾರಿಷಸ್ ತಲುಪಿದರು. ಅಲ್ಲಿ ಅವರು ಮಾರ್ಚ್ 12 ರಂದು ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭಾರತೀಯ ನೌಕಾಪಡೆಯ ನೌಕೆಯೊಂದಿಗೆ ಭಾರತೀಯ ರಕ್ಷಣಾ ಪಡೆಗಳ ಒಂದು ತುಕಡಿ ಸಮಾರಂಭದಲ್ಲಿ ಭಾಗವಹಿಸಲಿದೆ. ಮೋದಿ ಅವರನ್ನು ಮಾರಿಷಸ್ ಅಧ್ಯಕ್ಷ ಧರಮ್ ಗೋಖೂಲ್‌ ಸ್ವಾಗತಿಸಿದರು. ಮೋದಿ ಅವರು ಮಾರಿಷಸ್ ಜತೆ ಹಲವರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಭಾರತೀಯ ಸಮುದಾಯದವರನ್ನೂ ಭೇಟಿಮಾಡಲಿದ್ದಾರೆ.