3 ರಾಷ್ಟ್ರಗಳ ಯುರೋಪ್ ಪ್ರವಾಸದ ಬಳಿಕ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

ನವದೆಹಲಿ:

3 ದಿನಗಳ ಯುರೋಪಿಯನ್ ದೇಶಗಳಾದ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್‌ ಪ್ರವಾಸವನ್ನು ಪೂರ್ಣಗೊಳಿಸಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ನವದೆಹಲಿಗೆ ಆಗಮಿಸಿದ್ದಾರೆ.

ದೆಹಲಿದೆ ಆಗಮಿಸಿರುವ ಪ್ರಧಾನಿ ಮೋದಿಯವರು ಕೂಡಲೇ ಕಚೇರಿಗೆ ಭೇಡಿ ನೀಡಿ 7-8 ಸಭೆಗಳಲ್ಲಿ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.ದೇಶದ ಕೆಲವು ಭಾಗಗಳಲ್ಲಿ ಹೆಚ್ಚಾಗಿರುವ ಬಿಸಿಗಾಳಿ ಸಮಸ್ಯೆ ಮತ್ತು ಮುಂದಿನ ಮಳೆಗಾಲಕ್ಕೆ ಆಗಿರುವ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಲು ಸಭೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇನ್ನೊಂದೇ ವರ್ಷ: ಸಿದ್ದರಾಮಯ್ಯ ಅವರನ್ನೇ ಪಕ್ಷದಿಂದ ಹೊರ ಹಾಕ್ತಾರೆ ನೋಡ್ತಿರಿ: ಮುನಿರತ್ನ ಭವಿಷ್ಯ

ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸದ ವೇಳೆ ಮೋದಿಯವರು, ಮರು ಚುನಾಯಿತರಾಗಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದರು.ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು ಸಹಕಾರ ಮತ್ತು ಜನರಿಂದ ಜನರ ಸಂಪರ್ಕಗಳು, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳು ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಕುರಿತು ಮ್ಯಾಕ್ರನ್ ಜೊತೆಗೆ ಮೋದಿಯವರು ಚರ್ಚೆ ನಡೆಸಿದ್ದಾರೆ.

ಶಾಲೆ ಆರಂಭಿಸಲು ಸಿದ್ಧತೆ: ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಿಸಲು ಸಾರಿಗೆ ಇಲಾಖೆಗೆ ಮನವಿ

ಫ್ರಾನ್ಸ್ ಭೇಟಿ ಕುರಿತು ಟ್ವೀಟ್ ಮಾಡಿದ್ದ ಮೋದಿಯವರು, ಫ್ರಾನ್ಸ್ ಭೇಟಿಯು ಬಹಳ ಫಲಪ್ರದವಾಗಿದೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ನಾನು ಹಲವು ವಿಚಾರಗಳ ಕುರಿತು ಚರ್ಚಿಸಲು ಅವಕಾಶ ಸಿಕ್ಕಿತ್ತು. ಆತ್ಮೀಯ ಆತಿಥ್ಯಕ್ಕಾಗಿ ನಾನು ಅವರಿಗೆ ಮತ್ತು ಫ್ರೆಂಚ್ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ.

ಅಕ್ರಮ ನೇಮಕಾತಿಯಲ್ಲಿ ಅಶ್ವಥ್ ನಾರಾಯಣ ಗೆ ತುಂಬಾ ಅನುಭವವಿದೆ: ಹೆಚ್ ಡಿಕೆ ಹೊಸ ಬಾಂಬ್

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link